Daily Horoscope
✕

ಹಜ್ ಯಾತ್ರೆಗೆ ಏಕಾಂಗಿ ಸ್ತ್ರೀಯರಿಗೆ ಅವಕಾಶ

Webdunia
ಶುಕ್ರವಾರ, 14 ಅಕ್ಟೋಬರ್ 2022 (16:54 IST)
ಮುಸ್ಲಿಮರ ಪವಿತ್ರ ಹಜ್ ಯಾತ್ರೆಗೆ ಇನ್ನುಮುಂದೆ ಮಹಿಳೆಯರು ಪುರುಷರ ಜೊತೆಯಲ್ಲೇ ಹೋಗಬೇಕೆಂಬ ನಿಯಮವಿಲ್ಲ. ಮಹಿಳೆಯರು ಏಕಾಂಗಿಯಾಗಿ ಅಥವಾ ಮಹಿಳೆಯರ ಜೊತೆಯಲ್ಲೇ ಹಜ್ ಯಾತ್ರೆಗೆ ಹೋಗಲು ಅವಕಾಶ ನೀಡಲಾಗಿದೆ. ಸೌದಿ ಅರೇಬಿಯಾದ  ಪ್ರಧಾನಿಯಾಗಿರುವ ಮಹಾರಾಜ ಮೊಹಮ್ಮದ್ ಬಿನ್ ಸಲ್ಮಾನ್ ಈ ನಿಟ್ಟಿನಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದ್ದಾರೆ. ಹಜ್ ಇಸ್ಲಾಂ ಧರ್ಮದ 5 ಸ್ತಂಭಗಳಲ್ಲಿ ಒಂದಾಗಿದೆ. ಜೀವನದಲ್ಲಿ ಒಮ್ಮೆಯಾದರೂ ಹಜ್ ಯಾತ್ರೆಗೆ ತೆರಳಬೇಕೆಂದು ಮುಸ್ಲಿಮರು ಬಯಸುತ್ತಾರೆ. ಇದುವರೆಗೂ ಹಜ್ ಯಾತ್ರೆಗೆ ತೆರಳುವ ಮಹಿಳೆಯರ ಜೊತೆ ಪುರುಷರು ಇರಲೇಬೇಕಿತ್ತು. ಪುರುಷರ ರಕ್ಷಣೆ ಇಲ್ಲದೆ ಮಹಿಳೆಯರು ಹಜ್​ ಯಾತ್ರೆಗೆ ಹೋಗುವಂತಿರಲಿಲ್ಲ. ಆದರೆ, ಇದೀಗ ಸೌದಿ ಅರೇಬಿಯಾ ಆ ನಿಯಮದಲ್ಲಿ ಬದಲಾವಣೆಗಳನ್ನು ಮಾಡಿ, ಮಹಿಳೆಯರು ಸ್ವತಂತ್ರರಾಗಿ ಹಜ್ ಯಾತ್ರೆಗೆ ತೆರಳಲು ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ಮೆಕ್ಕಾಗೆ ಮುಸ್ಲಿಂ ಮಹಿಳೆಯರು ಇನ್ನುಮುಂದೆ ಯಾವುದೇ ಪುರುಷರ ರಕ್ಷಣೆ ಇಲ್ಲದೆ ತೆರಳಬಹುದು. ಹಾಗೇ, ಈ ಹಜ್ ಯಾತ್ರೆಗೆ ಬರುವ ಮಹಿಳೆಯರಿಗೆ ಯಾವುದೇ ತೊಂದರೆ ಆಗಬಾರದೆಂದು ಮಹಿಳೆಯರಿಗೆ ಸುರಕ್ಷತೆಯನ್ನೂ ಹೆಚ್ಚಿಸಲಾಗಿದೆ. ಈ ಬಗ್ಗೆ ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವ ತೌಫಿಕ್ ಬಿನ್ ಫೌಜಾನ್ ಅಲ್-ರಬಿಯಾ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments