ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮೇಲೆ ಬಾಲಿವುಡ್ನ ಹೆಸರಾಂತ ಗಾಯಕ ಲಕ್ಕಿ ಅಲಿ ಆರೋಪವೊಂದನ್ನು ಮಾಡಿದ್ದಾರೆ. ಎಕ್ಸ್ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಲಕ್ಕಿ ಅಲಿ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಎಎಸ್ ಪತಿ ಸುಧೀರ್ ರೆಡ್ಡಿ ಭೂ ಮಾಫಿಯಾ ಜೊತೆಗೆ ಕೈ ಜೋಡಿಸಿಕೊಂಡು ಬೆದರಿಕೆ ಹಾಕುತ್ತಿದ್ದಾರೆ. ಕೆಂಚೇನಹಳ್ಳಿ ಯಲಹಂಕ ಬಳಿ ಇರುವ ನನ್ನ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಲಾಗಿದೆ. ಬಲವಂತವಾಗಿ ನನ್ನ ಜಮೀನನ್ನು ಅತಿಕ್ರಮಿಸುತ್ತಿದ್ದಾರೆ. ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ನಿರಾಕರಿಸುತ್ತಿದ್ದಾರೆ.ಕಳೆದ 50 ವರ್ಷಗಳಿಂದ ನಾನು ಅಲ್ಲಿ ವಾಸಿಸುತ್ತಿದ್ದೇನೆ ಎಂದು ಗಾಯಕ ಲಕ್ಕಿ ಅಲಿ ಬರೆದುಕೊಂಡಿದ್ದಾರೆ.