Select Your Language

Notifications

webdunia
webdunia
webdunia
webdunia

ಆಸ್ತಿಗಾಗಿ ವೃದ್ಧ ತಾಯಿಯನ್ನೇ ಕತ್ತು ಹಿಸುಕಿ ಕೊಂದ ಪಾಪಿ ಮಗ

ಆಸ್ತಿಗಾಗಿ ವೃದ್ಧ ತಾಯಿಯನ್ನೇ ಕತ್ತು ಹಿಸುಕಿ ಕೊಂದ ಪಾಪಿ ಮಗ
ಒಡಿಶಾ , ಬುಧವಾರ, 4 ಅಕ್ಟೋಬರ್ 2023 (14:48 IST)
ಮನೆಯ ವಿಚಾರಕ್ಕೆ ನಡೆದ ಜಗಳದಲ್ಲಿ ಪಾಪಿ ಮಗನೊಬ್ಬ ತನ್ನ 92 ವರ್ಷದ ವೃದ್ಧ ತಾಯಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಒಡಿಶಾದ ಕಂಧಮಾಲ್‌ ನಲ್ಲಿ ನಡೆದಿದೆ.ತಾಯಿಯನ್ನು ಕೊಂದ  ಸಮೀರ್‌ ಕುಮಾರ್‌ ನಾಯಕ್‌,  ನಂತರ ತಾಯಿಯ ಮೃತದೇಹಕ್ಕೆ ಬೆಂಕಿ ಹಚ್ಚಿದ್ದಾನೆ.ಶನಿವಾರ ರಾತ್ರಿ ಮನೆಯ ವಿಚಾರವಾಗಿ ಜಗಳವಾಡಿದ್ದಾರೆ. ಈ ವೇಳೆ ಸಮೀರ್‌ ತಾಯಿ ಮಂಜುಳಾರನ್ನು ಕೊಲೆ ಮಾಡಿ, ಸಾಕ್ಷ್ಯ ನಾಶ ಮಾಡಲು ಮನೆಯಲ್ಲೇ ಶವಕ್ಕೆ ಬೆಂಕಿ ಹಚ್ಚಿದ್ದಾನೆ.ಬಳಿಕ ಗ್ರಾಮಸ್ಥರು ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.ಇನ್ನು ಕೊಲೆ ಮಾಡಿದ ಆರೋಪಿ ಸಮೀರ್‌ ಕುಮಾರ್‌ ಇತ್ತೀಚಿಗೆ ಪ್ರಕರಣವೊಂದರಲ್ಲಿ 3 ವರ್ಷ ಜೈಲು ಶಿಕ್ಷೆ ಅನುಭವಿಸಿ ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

BJP ಗೆ ಆರೋಪ ಮಾಡೋದೇ ಕೆಲಸವಾಗಿದೆ-ಸಿಎಮ್ ಸಿದ್ದು