ಅಪ್ಪ ಆ ಪದದಲ್ಲೇ ಒಂದು ರೀತಿಯ ಗಾಂಭೀರ್ಯ ಮತ್ತು ಗೌರವವಿದೆ.ಮಕ್ಕಳನ್ನ ಸಾಕಿ ಸಲಹೋದರಲ್ಲೇ ತನ್ನ ಜೀವನವನ್ನೇ ಸವೆಸಿಬಿಡ್ತಾನೆ. ತನ್ನ ಸರ್ವಸ್ವವನ್ನು ಮಕ್ಕಳಿಗಾಗಿ ಮುಡಿಪಾಗಿಡ್ತಾನೆ.ಆದ್ರೆ ಇಲ್ಲೊಬ್ಬ ಪರಮ ಪಾಪಿ ಜೀವ ಕೊಟ್ಟು ಸಾಕಿ ಸಲುಹಿದ ತಂದೆಯನ್ನೇ ಕೊಂದು ಮಗಿಸಿದ್ದಾನೆ.
.ಮಾರತ್ತಹಳ್ಳಿ ಸಮೀಪದ ಪಣತ್ತೂರಿನ ಕಾವೇರಪ್ಪ ಲೇಔಟ್ ನಿವಾಸಿ.ಇನ್ನೂ ಈತ ಮಣಿಕಂಠ.ಇದೇ ನಾರಯಣಸ್ವಾಮಿ ಪುತ್ರ.ಮಗನಿಗಾಗಿ ತಂದೆ ಸಾಕಷ್ಟು ಆಸ್ತಿ ಕೂಡ ಮಾಡಿದ್ದ.ಆದ್ರೆ ಇವತ್ತು ಅದೇ ಆಸ್ತಿ ಆತನಿಗೆ ಮುಳುವಾಗಿಬಿಟ್ಟಿದೆ.ಆಸ್ತಿ ವಿಚಾರಕ್ಕೆ ಇಲ್ಲಿ ತಂದೆ ಕೊಲೆಯಾಗಿ ಹೋಗಿದ್ದಾನೆ.ಅದು ಕೂಡ ತಂದೆ ಕೊಲೆಗೆ ಮಗನೇ ಸುಪಾರಿ ಕೊಟ್ಟಿದ್ದ.ಹೌದು.ಮಣಿಕಂಠ 2013 ರಲ್ಲಿ ಮೊದಲನೇ ಪತ್ನಿಯನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದ.ನಂತರ ಎರಡನೇ ಮದುವೆಯಾಗಿ ಪತ್ನಿಯಿಂದ ದೂರವಿದ್ದ.ಅಕ್ರಮ ಸಂಬಂಧ ಇಟ್ಟುಕೊಂಡು ಪತ್ನಿಗೆ ಕಿರುಕುಳ ಕೊಡ್ತಿದ್ದ.ಹಾಗಾಗಿ ಆಕೆ ಕೂಡ ಈಕೆಯಿಂದ ದೂರವಿದ್ದು ವಿಚ್ಛೇದನ ಪಡೆದುಕೊಳ್ಳಲು ಮುಂದಾಗಿದ್ಳು.ಈ ವೇಳೆ ಆಕೆಯ ತವರು ಮನೆಯಲ್ಲಿ ವಾಸವಿದ್ಳು.ಈ ವೇಳೆ ಆಕೆಗೆ ಚಾಕು ಇರಿದು ಜೈಲು ಸೇರಿದ್ದ.ಮಗನಿಗೆ ಒಂದು ಪುಟ್ಟ ಮಗಳು ಇದ್ದಿದ್ದರಿಂದ ಮಣಿಕಂಠ ಜೈಲಿನಲ್ಲಿದ್ದಾಗಲೇ ಮೊಮ್ಮಗಳ ಹೆಸರಿಗೆ ಆರು ಕೋಟಿ ಮೌಲ್ಯದ ಫ್ಲಾಟ್,ಸೈಟ್,ಜಮೀನನ್ನ ನಾರಾಯಣಸ್ವಾಮಿ ಬರೆದು ಕೊಟ್ಟಿದ್ದ.ಇದು ಜೈಲಿಂದ ಹೊರಬಂದ ಮಣಿಕಂಠ ಕಣ್ಣು ಕೆಂಪಾಗಿಸಿತ್ತು.
ಇಷ್ಟೇ ಅಲ್ಲದೇ ಸೊಸೆಗೆ ಕೊಲೆಯತ್ನ ಕೇಸ್ ಸಂಧಾನಕ್ಕಾಗಿ ಮತ್ತೊಂದು ಸೈಟ್ ಬರೆದುಕೊಡಲು ನಾರಾಯಣಸ್ವಾಮಿ ಮುಂದಾಗಿದ್ದ.ಇದು ಈತನ ಪಿತ್ತ ನೆತ್ತಿಗೇರುವಂತೆ ಮಾಡಿತ್ತು.ಹೇಗಾದ್ರು ಮಾಡಿ ತಂದೆಯನ್ನೇ ಮುಗಿಸಿಬಿಡ್ಬೇಕು ಅನ್ನೋ ನಿರ್ಧಾರಕ್ಕೆ ಬಂದುಬಿಟ್ಟಿದ್ದ.ಅದರಂತೆ ಜೈಲಿನಲ್ಲಿ ಪರಿಚಯವಾಗಿದ್ದ ಆದರ್ಶ್,ನಡವತ್ತಿ ಶಿವ ಎಂಬುವರಿಗೆ ಒಂದು ಕೋಟಿ ಹಣ,ಫ್ಲಾಟ್,ಕಾರು ಕೊಡೋದಾಗಿ ಹೇಳಿ ತಂದೆ ಕೊಲೆಗೆ ಸುಪಾರಿ ಕೊಟ್ಟಿದ್ದ ಮುಂಗಡವಾಗಿ 1 ಲಕ್ಷ ಹಣ ಕೊಟ್ಟಿದ್ದ.ಅದರಂತೆ ಫೆಬ್ರವರಿ 13 ರಂದು ಬೆಳಗ್ಗೆ 11 ಗಂಟೆಗೆ ಸೈಟ್ ರಿಜಿಸ್ಟ್ರೇಷನ್ ಗೆ ತೆರಳ್ತಿದ್ದಾಗ ಬಂದ ಸುಪಾರಿ ಹಂತಕ ನಡವತ್ತಿ ಶಿವ ಪಾರ್ಕಿಂಗ್ ಲಾಟ್ ನಲ್ಲಿ ವೃದ್ಧನನ್ನ ಕೊಚ್ಚಿ ಕೊಲೆ ಮಾಡಿದ್ದ.ಜೊತೆಗೇ ಇದ್ದ ಮಗ ಬಿಡಿಸೋ ಯತ್ನ ಕೂಡ ಮಾಡಿಲ್ಲ.ನಂತರ ಮಣಿಕಂಠ ತಾನೆ ಅಂತ್ಯ ಸಂಸ್ಕಾರ ಮಾಡಿ ಮುಗಿಸಿ ನಾಟಕ ಮಾಡಿದ್ದ.ಆದರೆ ಮಾರತ್ತಹಳ್ಳಿ ಪೊಲೀಸರು ತನಿಖೆ ಕೈಗೊಂಡು ಕಳ್ಳಾಟ ಬಯಲು ಮಾಡಿದ್ದಾರೆ.ಪುತ್ರ ಮಣಿಕಂಠ ಪ್ರಮುಖ ಆರೋಪಿ ನಡವತ್ತಿ ಶಿವ ಮತ್ತು ಆದರ್ಶ್ ಸೇರಿ ಮೂವರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ
ಸಣ್ಣ ಪುಟ್ಟ ರಿಯಲ್ ಎಸ್ಟೇಟ್ ಮಾಡಿಕೊಂಡಿದ್ದ ವೃದ್ಧ ನೂರಾರು ಕೋಟಿ ಆಸ್ತಿ ಮಾಡಿದ್ದ.ಅಲ್ಲದೇ ಮಗನಿಗೂ ನೀಡಿದ್ದ.ತಂದೆಯ ನೆರಳಲ್ಲಿ ಬದುಕು ಕಟ್ಟಿಕೊಂಡಿದ್ದಿದ್ರೆ ಒಂದೊಳ್ಳೆ ಜೀವನ ನಡೆಸಬಹುದಿತ್ತು.ಆದರೆ ಅತಿಯಾಸೆಗೆ ಬಿದ್ದು ತಾನೆ ಜೈಲು ಸೇರುವಂತಾಗಿದೆ.ಈತನ ಈ ಪರಮ ಪಾಪದ ಕೃತ್ಯ ನಿಜಕ್ಕೂ ಕ್ಷಮಿಸುವಂತದ್ದಲ್ಲ.