ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಮಾಜಿ ಬೆಂಗಳೂರು ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಅವರ ಹೆಸರು ಘೋಷಣೆ ಆಗುತ್ತಿದ್ದಂತೆ, ರೌಡಿ ಶೀಟರ್ ಸೈಲೆಂಟ್ ಸುನೀಲನ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಬಿಜೆಪಿ ಕಚೇರಿಗೆ ನುಗ್ಗಿ ದಾಂಧಲೆಯನ್ನೂ ಮಾಡಿದ್ದರು.ಬಳಿಕ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಅಣ್ಣಾಮಲೈ, ಸೈಲೆಂಟ್ ಸುನೀಲ ಹಾಗೂ ಅವರ ಬೆಂಬಲಿಗರಿಗೆ ಎಚ್ಚರಿಕೆ ನೀಡಿದ್ದೂ ಆಯ್ತು. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸೈಲೆಂಟ್ ಸುನೀಲ ನಮ್ಮ ಪಕ್ಷದವನೇ ಅಲ್ಲ, ಅವರಿಗೆ ಟಿಕೆಟ್ ನೀಡೋದು ಹೇಗೆ ಎಂದು ಉಲ್ಟಾ ಹೊಡೆದಿದ್ದಾರೆ....ನಮ್ಮಲ್ಲಿ ಆರೋಪ ಸಾಬೀತಾದವರಿಗೆ ಟಿಕೆಟ್ ಕೊಟ್ಟಿಲ್ಲ. ನಾವು ವಿನಯ್ ಕುಲಕರ್ಣಿ ಅಂಥವರಿಗೆ ಟಿಕೆಟ್ ಕೊಟ್ಟಿಲ ಕಾಂಗ್ರೆಸ್ ಗೆ ಅಭ್ಯರ್ಥಿ ಗಳ ಕೊರತೆ ಕಾಡುತ್ತಿದೆ. ಸಿದ್ದರಾಮಯ್ಯ ಟೀಮ್ ಡಿಕೆ ಟೀಮ್ ಯಾರಿಗೆ ಎಷ್ಟು ಟಿಕೆಟ್ ಸಿಕ್ಕಿತು ಎನ್ನುವ ಲೆಕ್ಕಾಚಾರ ಶುರುವಾಗಿದೆ .ಕನಕಪುರ, ವರುಣಾಗೆ ನಮ್ಮ ಅಭ್ಯರ್ಥಿ ಘೋಷಣೆ ಆದಮೇಲೆ ಕಾಂಗ್ರೆಸ್ ನಾಯಕರು ಅವರ ಕ್ಷೇತ್ರಕ್ಕೆ ಸೀಮಿತ ಆಗಿದ್ದಾರೆ ಎಂದು ವ್ಯಂಗ್ಯ ಮಾಡಿದ್ರು