Select Your Language

Notifications

webdunia
webdunia
webdunia
webdunia

ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎಲ್ಲಾ ಸೇತುವೆ ಇಫೆಕ್ಟ್

Siganduru bridge

Krishnaveni K

ಶಿವಮೊಗ್ಗ , ಬುಧವಾರ, 16 ಜುಲೈ 2025 (10:23 IST)
Photo Credit: X
ಶಿವಮೊಗ್ಗ: ಐತಿಹಾಸಿಕ ಚೌಡೇಶ್ವರಿ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಇದೀಗ ದಿಡೀರ್ ಹೆಚ್ಚಳವಾಗಿದೆ. ಇದೆಲ್ಲಾ ಮೊನ್ನೆಯಷ್ಟೇ ಉದ್ಘಾಟನೆಯಾಗಿರುವ ಸೇತುವೆ ಇಫೆಕ್ಟ್.

ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಕಳೆದ ಎರಡು ದಿನಗಳಿಂದ ದಿಡೀರ್ ಹೆಚ್ಚಳವಾಗಿದೆ. ಇದಕ್ಕೆ ಕಾರಣ ಹೊಸದಾಗಿ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿರುವ ಸೇತುವೆ. ಸಾಕಷ್ಟು ಜನ ಭಕ್ತರು ಆಗಮಿಸುತ್ತಿರುವುದಕ್ಕೆ ಎರಡು ಕಾರಣಗಳಿವೆ.

ಸಿಗಂದೂರು ಸೇತುವೆ ದೇಶದ ಎರಡನೇ ಅತೀ ದೊಡ್ಡ ಕೇಬಲ್ ಸೇತುವೆಯಾಗಿದೆ. 2.5 ಕಿ.ಮೀ. ಉದ್ದದ ಸೇತುವೆಯಲ್ಲಿ ಸಂಚರಿಸುವಾಗ ಎತ್ತರದಿಂದ ಶರವಾತಿ ಹಿನ್ನೀರಿನ ದೃಶ್ಯ ಸುಂದರವಾಗಿ ಕಾಣುತ್ತದೆ. ಈ ವಿಹಂಗಮ ನೋಟವನ್ನು ನೋಡಲೆಂದೇ ಈ ಸೇತುವೆಯಲ್ಲಿ ಸಂಚರಿಸುವವರ ಸಂಖ್ಯೆ ಹೆಚ್ಚಾಗಿದೆ.

ಸಿಗಂದೂರು ಸೇತುವೆ ದಾಟಿದ ತಕ್ಷಣ ಸಿಗುವುದೇ ಚೌಡೇಶ್ವರಿ ಅಮ್ಮನವರ ಸನ್ನಿದಾನ. ಹೀಗಾಗಿ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಳವಾಗಿರುವುದಕ್ಕೆ ಇದು ಮುಖ್ಯ ಕಾರಣವಾಗಿದೆ. ಇನ್ನೊಂದು ಮುಖ್ಯ ಕಾರಣವೆಂದರೆ ಈ ಮೊದಲು ಲಾಂಚ್ ನಲ್ಲಿ ಪ್ರಯಾಣಿಸುವಾಗ ಸಿಗಂದೂರು ದೇವಾಲಯಕ್ಕೆ ಹೋಗಲು ಸಮಯ ಮಿತಿಯಿತ್ತು.

ಸಂಜೆ 7 ಗಂಟೆ ಮೇಲೆ ಲಾಂಚ್ ಇರುತ್ತಿರಲಿಲ್ಲ. ಹೀಗಾಗಿ ಹಗಲು ಹೊತ್ತಿನಲ್ಲಿ ಮಾತ್ರ ದೇವಾಲಯಕ್ಕೆ ಭಕ್ತರು ತೆರಳಬೇಕಾಗಿತ್ತು. ರಾತ್ರಿ ಭಕ್ತರ ಸಂಖ್ಯೆ ವಿರಳವಾಗಿತ್ತು. ಆದರೆ ಈಗ ರಾತ್ರಿ ಸಂಚಾರಕ್ಕೆ ಯಾವುದೇ ಸಮಸ್ಯೆಯಿಲ್ಲ. ಹೀಗಾಗಿ ಭಕ್ತರೂ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮತ್ತೆ ಮುನ್ನಲೆಗೆ