Publish Date: Fri, 24 Feb 2023 (09:39 IST)
Updated Date: Fri, 24 Feb 2023 (09:40 IST)
ಮೈಸೂರು : ಸಾಂಸ್ಕೃತಿಕ ಮೈಸೂರು ನಗರಿ ಮೈಸೂರಿನಲ್ಲಿ ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅವರು ಅಸಾಂವಿಧಾನಿಕ ಪದ ಪ್ರಯೋಗ ಮಾಡಿದ್ದು, ಅನಗತ್ಯ ವಿವಾದ ಹುಟ್ಟುಹಾಕಿದ್ದಾರೆ. ಆದರೆ ತಮ್ಮಿಂದಾದ ಪ್ರಮಾದ ಅರಿವಿಗೆ ಬರುತ್ತಿದ್ದಂತೆ ಅವರು ತಕ್ಷಣ ಕ್ಷಮೆಯಾಚಿಸಿದ್ದಾರೆ.
ತಮ್ಮ ಜೀವನದುದ್ದಕ್ಕೂ ರಾಜಕಾರಣಿಗಳ ವಿರುದ್ಧ ಸಾಮೂಹಿಕವಾಗಿ ತಮ್ಮ ವಾಕ್ಝರಿ ಹರಿಸುತ್ತಾ ಬಂದಿರುವ ನಾಡಿನ ಸಾಕ್ಷಿಪ್ರಜ್ಞೆಯಂತಿರುವ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆ.
ಈ ವೇಳೆ ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಎಂಕೆ ಸೋಮಶೇಖರ್ ಅವರ ಅಭಿಮಾನಿಗಳು ಮಾಸ್ಟರ್ ಹಿರಣ್ಣಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.