Webdunia - Bharat's app for daily news and videos

Install App

ಕೈ ನಾಯಕರ ಬಂಡಾಯ ಶಮನಕ್ಕೆ ಮುಂದಾದ ಸಿದ್ದರಾಮಯ್ಯ

Webdunia
ಮಂಗಳವಾರ, 16 ಅಕ್ಟೋಬರ್ 2018 (14:36 IST)
ರಾಜ್ಯದಲ್ಲಿ ಉಪಚುನಾವಣೆ ಕಾವಿನ ನಡುವೆ ಕೈ ಪಾಳೆಯದಲ್ಲಿ ಎದ್ದಿರುವ ಬಂಡಾಯ ಶಮನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅಖಾಡಕ್ಕೆ ಇಳಿದಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಧಾನ ಸಭೆ ಕ್ಷೇತ್ರದ ಕಾಂಗ್ರೆಸ್ ನಾಯಕರಲ್ಲಿ ಅಸಮಧಾನ ಭುಗಿಲೆದ್ದಿದೆ. ಕಾಂಗ್ರೆಸ್ ಮುಖಂಡ ಸುಶಿಲ್ ಕುಮಾರ ಬೆಳಗಲಿ ಬಂಡಾಯದ ಬಾವುಟ ಹಾರಿಸಿದ್ದಾರೆ.

ಹೀಗಾಗಿ ಸುಶೀಲ್ ಕುಮಾರ ಬೆಳಗಲಿ ಜತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತುಕತೆಗೆ ಆಹ್ವಾನಿಸಿದ್ದಾರೆ.  

ಜಮಖಂಡಿ ನಗರದ ಬಿ ಎಲ್ ಡಿ ಇ ಗೆಸ್ಟ್ ಹೌಸ್ ನಲ್ಲಿ ಮಾತುಕತೆ ನಡೆಯಲಿದೆ. ಈ ವೇಳೆ ಜಮಖಂಡಿ ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದರ ಜತೆಗೆ ಪಕ್ಷದಲ್ಲಿ ಒಗ್ಗಟ್ಟು ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಮುಖಂಡರಿಗೆ, ಮಾಜಿ ಸಿಎಂ ಹೇಳಲಿದ್ದಾರೆ.

ಬಂಡಾಯ ಎದ್ದಿರುವ ಸುಶೀಲ್ ಕುಮಾರ ಬೆಳಗಲಿ ಮನವೊಲಿಸುವ ಕಾರ್ಯವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಲಿದ್ದಾರೆ. ವಿಧಾನ ಸಭೆ ಉಪಚುನಾವಣೆಯ ಟಿಕೆಟ್ ಸಿಗದ ಹಿನ್ನೆಲೆ ಅಸಮಾಧಾನಗೊಂಡಿದ್ದ ಬೆಳಗಲಿ ಅತೃಪ್ತಿ ಹೊರಹಾಕಿದ್ದರು. ಸಿದ್ದರಾಮಯ್ಯರ ಮನವೊಲಿಕೆಗೆ ಸಹಮತ ವ್ಯಕ್ತಪಡಿಸುತ್ತಾರಾ? ಎನ್ನುವ ಕುತೂಹಲ ಮೂಡಿಸಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೀದಿ ನಾಯಿ ಪ್ರಕರಣದಲ್ಲಿ ಸುಪ್ರೀಂ ತೀರ್ಪುನ ಬಳಿಕ ಕ್ರಮಕ್ಕೆ ಮುಂದಾದ ಸರ್ಕಾರ

ಕಲಾಸಿಪಾಳ್ಯ: ಕೇಸರಿ ಶಾಲು ಧರಿಸಿದ್ದಕ್ಕೆ ಹಿಗ್ಗಾಮುಗ್ಗಾ ಥಳಿತ, ತನಿಖೆಯಲ್ಲಿ ಭಾರೀ ಬೆಳವಣಿಗೆ

ಡಿಕೆಶಿಗೆ ಅದು ತಪ್ಪು ಅಂತ ಗೊತ್ತಾಗಿದ್ರೆ ಸಂತೋಷ ಎಂದ ಬಿಕೆ ಹರಿಪ್ರಸಾದ್

ಚಾಮುಂಡೇಶ್ವರಿ ಕೇವಲ ಹಿಂದೂಗಳ ಆಸ್ತಿಯಲ್ಲ: ಡಿಕೆ ಶಿವಕುಮಾರ್

ಭಾರತ ವಿಶ್ವಗುರು ಆಗಬೇಕೆನ್ನುವುದ ಪ್ರಿಯಾಂಕ್‌ ಖರ್ಗೆಗೆ ಸಹಿಸಲಿಕ್ಕಾಗದ ಸಂಗತಿಯೇ: ಸಿಟಿ ರವಿ

ಮುಂದಿನ ಸುದ್ದಿ
Show comments