Publish Date: Thu, 28 May 2026 (15:04 IST)
Updated Date: Thu, 28 May 2026 (15:10 IST)
ಬೆಂಗಳೂರು: ಡಿಕೆ ಶಿವಕುಮಾರ್ ಗೆ ನನ್ನ ಜಾಗದಲ್ಲಿ ನೀನು ಕೂತ್ಕೋ ಎಂದು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲು ಲೋಕಭವನಕ್ಕೆ ತೆರಳಿದ್ದಾರೆ.
ಇಂದು ಸಚಿವರ ಜೊತೆ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ತಾವು ರಾಜೀನಾಮೆ ನೀಡುತ್ತಿರುವ ವಿಚಾರವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಬಳಿಕ ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಂದು ಘೋಷಣೆಯನ್ನೂ ಮಾಡಿದ್ದಾರೆ. ಈ ವೇಳೆ ಕಾಲಿಗೆ ಬಿದ್ದ ಡಿಕೆ ಶಿವಕುಮಾರ್ ಗೆ ಆಶೀರ್ವಾದವನ್ನೂ ಮಾಡಿದ್ದಾರೆ.
ಸಚಿವರ ಜೊತೆ ಮೀಟಿಂಗ್ ವೇಳೆ ಸಿದ್ದರಾಮಯ್ಯ ಕೊಂಚ ಭಾವುಕರಾದಂತೆ ಕಂಡುಬಂದಿತ್ತು. ಕೆಲವು ಸಮಯದ ಹಿಂದೆಯೇ ಸಿದ್ದರಾಮಯ್ಯಗೆ ತಾವು ಸಿಎಂ ಸ್ಥಾನ ಬಿಟ್ಟುಕೊಡಬೇಕಾಗಬಹುದು ಎಂಬ ಸೂಚನೆ ಸಿಕ್ಕಿತ್ತೇನೋ ಏನೋ. ಅದರಂತೆ ಅಂದು ಕಾರ್ಯಕ್ರಮವೊಂದರಲ್ಲಿ ತಮ್ಮ ಸೀಟ್ ನಲ್ಲಿ ಕೂತ ಡಿಕೆ ಶಿವಕುಮಾರ್ ಗೆ ನನ್ನ ಸೀಟ್ ನಲ್ಲೇ ಕೂತ್ಕೋ ಎಂದು ಬಹಿರಂಗವಾಗಿಯೇ ಕಾಲೆಳೆದಿದ್ದರು.
ಇಂದು ಅಧಿಕೃತವಾಗಿಯೇ ಡಿಕೆಶಿಗೆ ತಮ್ಮ ಸ್ಥಾನ ಬಿಟ್ಟುಕೊಟ್ಟು ರಾಜೀನಾಮೆ ನೀಡಲು ಲೋಕಭವನಕ್ಕೆ ಬಂದಿದ್ದಾರೆ. ಇದರೊಂದಿಗೆ ಸಿದ್ದರಾಮಯ್ಯ ಅಧಿಕೃತವಾಗಿ ಸಿಎಂ ಸ್ಥಾನಕ್ಕೆ ಗುಡ್ ಬೈ ಹೇಳಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ