Select Your Language

Notifications

webdunia
webdunia
webdunia
Friday, 11 April 2025
webdunia

ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡ-ಎಂಎಲ್​​ಸಿ ಎಚ್. ವಿಶ್ವನಾಥ್

Siddaramaiah was taken to task
bangalore , ಬುಧವಾರ, 10 ಆಗಸ್ಟ್ 2022 (18:58 IST)
ಈಗಾಗಲೇ ಮಕ್ಕಳಿಗೆ 42 ವರ್ಷ ಆಗಿದೆ . ಅವರವರ ದಾರಿ ಅವರು ನೋಡಿಕೊಂಡು ಹೋಗ್ತಾರೆ. ಮಕ್ಕಳಿಗೆ ಸ್ವಾತಂತ್ರ್ಯ ಕೊಡದೆ ಇರೋಕೆ ಆಗುತ್ತಾ? ಮಗ ಹೋಗೋದು ಬೇರೆ, ನಾನು ಕಾಂಗ್ರೆಸ್‌ ನಡವಳಿಕೆ ಬಗ್ಗೆ ಟೀಕೆ ಮಾಡೋದು ಬೇರೆ. ನಾನು ಎಲ್ಲ ಪಕ್ಷದ್ದು ಏನಿದೆಯೋ ಅದನ್ನು ಹೇಳ್ತೀನಿ. ನಾನು ಒಂಥರಾ ಸುಡುಗಾಡು ಸಿದ್ದನ ಹಾಗೆ ಎಂದು ಪರೋಕ್ಷವಾಗಿ ಸಮರ್ಥಿಸಿಕೊಂಡರು. ಇದೇ ವೇಳೆ ಸಿಎಂ ಬದಲಾವಣೆ ಎಂಬ ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿದ ಎಚ್.ವಿಶ್ವನಾಥ್, ಕಾಂಗ್ರೆಸ್‌ನವರು ಬಹಳ ಅವಸರದವರು. ದಾವಣಗೆರೆ ಸಮಾವೇಶ ಆದ ಮೇಲೆ ಜನ ಎಲ್ಲ ಡಬ್ಬಗಳನ್ನು ತುಂಬುತ್ತಾರೆ ಅನ್ನುವ ಭ್ರಮೆಯಲ್ಲಿದ್ದಾರೆ. ಕಾಂಗ್ರೆಸ್‌ನಲ್ಲಿ ಕೆಲವರು ಈಗಾಗಲೇ ಮಂತ್ರಿಗಳಾಗಿದ್ದಾರೆ. ಇಲಾಖೆ ಕೂಡ ಹಂಚಿಕೊಂಡಿದ್ದಾರೆ ಎಂದು ವ್ಯಂಗ್ಯವಾಗಿ ಟೀಕಿಸಿದರು. ಸಿಎಂ ಬದಲಾವಣೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅದರ ಬಗ್ಗೆ ನಾವ್ಯಾರು ಹೇಳೋಕೆ? ಬೊಮ್ಮಾಯಿ‌ ಅವರ ಪಾಡಿಗೆ ಅವರು ಕೆಲಸ ಮಾಡ್ತಿದ್ದಾರೆ. ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ವಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಶ್ಯಾಡೋ ಸಿಎಂ ಆಗಿರಬೇಕು. ಆದರೆ ನಿನ್ನ ಜವಾಬ್ದಾರಿ ನೀನು ನಿಭಾಯಿಸುತ್ತಿಲ್ಲ. ಬೇರೆಯವರ ಜವಾಬ್ದಾರಿ ಬಗ್ಗೆ ಟೀಕೆ ಮಾಡುವ ಅಧಿಕಾರ ಏನಿದೆ? ಎಂದು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್