Webdunia - Bharat's app for daily news and videos

Install App

ಪಾಕಿಸ್ತಾನದೊಂದಿಗೆ ಯುದ್ಧ ಬೇಡ ಎಂದಿದ್ದ ಸಿಎಂ ಸಿದ್ದರಾಮಯ್ಯ ಈಗ ಹೇಳೋದೇ ಬೇರೆ

Krishnaveni K
ಶುಕ್ರವಾರ, 16 ಮೇ 2025 (15:05 IST)
ಬೆಂಗಳೂರು: ಪಹಲ್ಗಾಮ್ ದಾಳಿ ಬೆನ್ನಲ್ಲೇ ಪಾಕಿಸ್ತಾನ ಜೊತೆ ಯುದ್ಧ ಬೇಡ ಎಂದಿದ್ದ ಸಿಎಂ ಸಿದ್ದರಾಮಯ್ಯ ಈಗ ತಮ್ಮ ವರಸೆಯನ್ನೇ ಬದಲಿಸಿದ್ದಾರೆ. ಕದನ ವಿರಾಮದ ಬಗ್ಗೆ ಸಿಎಂ ಇಂದು ಕೇಂದ್ರವನ್ನು ಟೀಕಿಸಿದ್ದಾರೆ.

ಪಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನದ ಜೊತೆ ಯುದ್ಧ ಮಾಡಬೇಕಾ ಸಾರ್ ಎಂದು ಮಾಧ್ಯಮಗಳು ಪ್ರಶ್ನಿಸಿದಾಗ ಯುದ್ಧ ಬೇಡ ಎಂದು ಪಾಕ್ ನಲ್ಲೂ ಸಿದ್ದರಾಮಯ್ಯ ಫೇಮಸ್ ಆಗಿದ್ದರು. ಆದರೆ ಇಂದು ಅವರ ವರಸೆಯೇ ಬದಲಾಗಿದೆ.

ಉಗ್ರರಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಒಳ್ಳೆಯ ಅವಕಾಶವಿತ್ತು. ನಮ್ಮ ಮೇಲೆ ಸದಾ ದಾಳಿ ಮಾಡುವ ಉಗ್ರರನ್ನು ಮಟ್ಟ ಹಾಕಲು ಅವಕಾಶವಿತ್ತು. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅದನ್ನು ಹಾಳು ಮಾಡಿದರು. ಟ್ರಂಪ್ ಮಾತು ಕೇಳಿಕೊಂಡು ಕದನ ವಿರಾಮ ಮಾಡಿದರು ಎಂದಿದ್ದಾರೆ.

ಹಾಗಿದ್ದರೆ ಅಂದು ಯುದ್ಧ ಬೇಡ ಎಂದು ಹೇಳಿದ್ದಿರಲ್ಲಾ ಎಂದು ಕೇಳಿದಾಗ ‘ಆಗ ನಾನು ನೀವ್ಯಾರೋ ಕೇಳಿದ್ದರಲ್ಲ ಅದಕ್ಕೆ ಯುದ್ಧ ಬೇಡ, ಆದರೆ ಅದರ ಹೊರತು ಬೇರೆ ಏನಾದರೂ ಮಾಡಬಹುದು ಎಂದಿದ್ದೆ. ಆದರೆ ಅನಿವಾರ್ಯವಾದರೆ ನಮ್ಮ ದೇಶ ರಕ್ಷಣೆಗೆ ಯುದ್ಧ ಮಾಡಲೇಬೇಕಾಗುತ್ತದೆ ಎಂದಿದ್ದೆ. ಆದರೆ ಅನಿವಾರ್ಯವಾದರೆ ಯುದ್ಧ ಮಾಡಲಿ ಎಂದಿದ್ದನ್ನು ಬಿಟ್ಟು ಬೇಡ ಎಂದಿದ್ದನ್ನೇ ಪ್ರಚಾರ ಮಾಡಿದರು’ ಎಂದು ಸಿಎಂ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜಾ ರಘುವಂಶಿ ಪ್ರಕರಣ: ಸೋನಮ್ ಜತೆ ಸಂಪರ್ಕದಲ್ಲಿದ್ದ ಮತ್ತಿಬ್ಬರು ಅರೆಸ್ಟ್‌, ಇವರ ಪಾತ್ರವೇನು ಗೊತ್ತಾ

ದೊಡ್ಡ ದುರಂತ ಬೆನ್ನಲ್ಲೇ ಏರ್‌ ಇಂಡಿಯಾಗೆ ಬಾಂಬ್ ಬೆದರಿಕೆ: ನವದೆಹಲಿಗೆ ಹೊರಟಿದ್ದ ವಿಮಾನ ರಿಯಾದ್‌ನಲ್ಲಿ ತುರ್ತು ಭೂಸ್ಪರ್ಶ

ಬೃಹತ್‌ ರ‍್ಯಾಲಿ ವೇಳೆ ವೈಎಸ್‌ಆರ್‌ ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹರಿದ ಜಗನ್‌ಮೋಹನ್‌ ರೆಡ್ಡಿ ಕಾರು

ಇರಾನ್‌– ಇಸ್ರೇಲ್‌ ಸಂಘರ್ಷ ಶಮನಕ್ಕೆ ಮೋದಿ ರಂಗಪ್ರವೇಶ: ಭಾರತದ ಪ್ರಧಾನಿಗೆ ಧನ್ಯವಾದ ಹೇಳಿದ ಇರಾನ್

ಬಿ.ಆರ್ ಪಾಟೀಲ್ ಸತ್ಯವನ್ನೇ ಹೇಳಿದ್ದಾರೆ : ವಿಜಯೇಂದ್ರ

ಮುಂದಿನ ಸುದ್ದಿ
Show comments