Webdunia - Bharat's app for daily news and videos

Install App

ರೈಲು ದರ ಹೆಚ್ಚಿಸಿದ್ದು ಸರಿಯಲ್ಲ ಸಿದ್ದರಾಮಯ್ಯ: ಬಿಎಂಟಿಸಿಯಲ್ಲಿ ಕೋಟ್ಯಾಧಿಪತಿಗಳು ಹೋಗ್ತಾರಾ ಎಂದ ನೆಟ್ಟಿಗರು

Krishnaveni K
ಬುಧವಾರ, 2 ಜುಲೈ 2025 (09:56 IST)
ಬೆಂಗಳೂರು: ಸಾಮಾನ್ಯ ಜನರು ಓಡಾಡುವ ರೈಲು ಪ್ರಯಾಣ ದರವನ್ನು ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಕೋಟ್ಯಾಂತರ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕಿನ ಮೇಲೆ ಬರೆ ಹಾಕಿದೆ ಎಂದು ಸಿಎಂ ಸಿದ್ದರಾಮಯ್ಯ ಆಪಾದಿಸಿದ್ದಾರೆ. ಆದರೆ ಈ ಸಿಎಂ ಈ ಹೇಳಿಕೆಗೆ ಜನ ಹಾಗಿದ್ದರೆ ಬಿಎಂಟಿಯಲ್ಲಿ ಕೋಟ್ಯಾದಿಪತಿಗಳು ಓಡಾಡ್ತಾರಾ ಎಂದು ಟಾಂಗ್ ಕೊಟ್ಟಿದ್ದಾರೆ.

ಇಂದಿನಿಂದ ರೈಲು ಪ್ರಯಾಣ ದರ ಪ್ರತೀ ಕಿ.ಮೀ.ಗೆ 1 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ. ಇದರ ವಿರುದ್ಧ ಸಿಎಂ ಟ್ವೀಟ್ ಮಾಡಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಾಮಾನ್ಯ ಜನರ ಸಾರಿಗೆಯಾಗಿಯೇ ಜನಪ್ರಿಯವಾಗಿರುವ ರೈಲುಗಳ ಪ್ರಯಾಣ ದರವನ್ನು ಹೆಚ್ಚಿಸುವ ಮೂಲಕ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ದೇಶದ ಕೋಟ್ಯಂತರ ಮಧ್ಯಮ ಮತ್ತು ಬಡವರ್ಗದ ಬದುಕಿನ ಮೇಲೆ ಬರೆ ಎಳೆದಿದೆ. ಈ ಬೆಲೆ ಏರಿಕೆಯನ್ನು ತಕ್ಷಣ ಹಿಂದೆಗೆದುಕೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಆದರೆ ಸಿದ್ದರಾಮಯ್ಯ ಹೇಳಿಕೆ ಅವರಿಗೇ ಮುಳುವಾಗಿದೆ. ರಾಜ್ಯ ಸರ್ಕಾರವೂ ಇಲ್ಲಿ ಬಸ್, ಆಟೋ ದರವನ್ನು ಹೆಚ್ಚಿಸಿದೆ. ಇತ್ತೀಚೆಗಷ್ಟೇ ಬಿಎಂಟಿಸಿ, ಕೆಎಸ್ ಆರ್ ಟಿಸಿ ದರವನ್ನು ಶೇ.15 ರಷ್ಟು ಹೆಚ್ಚಿಸಿತ್ತು. ತಾನೇ ಬೇಕಾಬಿಟ್ಟಿ ಬೆಲೆ ಏರಿಕೆ ಮಾಡಿಕೊಂಡು ಕೇಂದ್ರ ಕೇವಲ 1 ಪೈಸೆ ಹೆಚ್ಚಳ ಮಾಡಿರುವುದನ್ನು ಎತ್ತಿ ಆಡುತ್ತಿರುವುದಕ್ಕೆ ಸಿದ್ದರಾಮಯ್ಯ ಟ್ರೋಲ್ ಆಗಿದ್ದಾರೆ.

ಹಾಗಿದ್ದರೆ ಬಿಎಂಟಿಸಿ, ಕೆಎಸ್ ಆರ್ ಟಿಸಿಯಲ್ಲಿ ಓಡಾಡುವವರು ಜನ ಸಾಮಾನ್ಯರಲ್ಲವೇ? ಕೋಟ್ಯಾಧಿಪತಿಗಳು ಓಡಾಡುತ್ತಾರಾ? ನೀವು ಶೇ.15 ರಷ್ಟು ಟಿಕೆಟ್ ದರ ಹೆಚ್ಚಳ ಮಾಡಿದ್ದರಿಂದ ಜನರಿಗೆ ಬರೆ ಎಳೆದಂತಾಗಲ್ವೇ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಾಲ್ಮೀಕಿ ನಿಗಮದ ಹಗರಣ: ಬಳ್ಳಾರಿ ಸಂಸದ, ಶಾಸಕರ ರಾಜೀನಾಮೆಗೆ ಬಿ.ಶ್ರೀರಾಮುಲು ಆಗ್ರಹ

ಸಿದ್ದರಾಮಯ್ಯ ರಾಜೀನಾಮೆ ಪಡೆಯಲು ಸುರ್ಜೇವಾಲ ಬಂದಿದ್ದಾರೆ: ಬಿವೈ ವಿಜಯೇಂದ್ರ

ನನಗೆ ಬೇರೆ ದಾರಿಯಿಲ್ಲ: ಸಿಎಂ ಕುರ್ಚಿ ಬಗ್ಗೆ ಡಿಕೆ ಶಿವಕುಮಾರ್ ಶಾಕಿಂಗ್ ಹೇಳಿಕೆ

ವಿಶ್ವಸಂಸ್ಥೆಯನ್ನು ಮುನ್ನಡೆಸುವ ಜವಾಬ್ಧಾರಿ ಪಾಕಿಸ್ತಾನಕ್ಕೆ: ರಣದೀಪ್ ಸುರ್ಜೇವಾಲ

ನಂದಿಬೆಟ್ಟದಲ್ಲಿ ಸಂಪುಟ ಸಭೆಗೆ ಮುನ್ನ ಸಿದ್ದರಾಮಯ್ಯ ಟೆಂಪಲ್ ರನ್

ಮುಂದಿನ ಸುದ್ದಿ
Show comments