ಇನ್ಫೋಸಿಸ್ ನವರು ಬೃಹಸ್ಪತಿಗಳಾ ಎಂದ ಸಿದ್ದರಾಮಯ್ಯ: ನಿಮಗಿಂತಲೂ ದೊಡ್ಡ ಕೊಡುಗೆ ನೀಡಿದ್ದಾರೆ ಎಂದ ನೆಟ್ಟಿಗರು

Krishnaveni K
ಶನಿವಾರ, 18 ಅಕ್ಟೋಬರ್ 2025 (10:02 IST)
ಬೆಂಗಳೂರು: ಕರ್ನಾಟಕ ಜಾತಿಗಣತಿಯಲ್ಲಿ ಪಾಲ್ಗೊಳ್ಳದ ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ಏನು ಬೃಹಸ್ಪತಿಗಳಾ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದರು. ಇದಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು ಹೌದು ಅವರು ಬೃಹಸ್ಪತಿಗಳೇ ನಿಮಗಿಂತ ಹೆಚ್ಚು ಕೊಡುಗೆ ಇದೆ ಅವರದ್ದು ಎಂದಿದ್ದಾರೆ.

ಸುಧಾಮೂರ್ತಿ ದಂಪತಿ ನಾವು ಹಿಂದುಳಿದ ವರ್ಗಕ್ಕೆ ಸೇರಿದವರಲ್ಲ. ಹೀಗಾಗಿ ಗಣತಿಯಲ್ಲಿ ಪಾಲ್ಗೊಳ್ಳಲ್ಲ ಎಂದು ನಿರಾಕರಿಸಿದ್ದರು. ಈ ವಿಚಾರವಾಗಿ ನಿನ್ನೆ ಮಾಧ್ಯಮಗಳು ಸಿಎಂ ಸಿದ್ದರಾಮಯ್ಯಗೆ ಪ್ರಶ್ನೆ ಮಾಡಿವೆ. ಇದಕ್ಕೆ ಸಿಎಂ ಅವರೇನು ಬೃಹಸ್ಪತಿಗಳಾ ಎಂದು ವ್ಯಂಗ್ಯ ಮಾಡಿದ್ದರು.

ಸಿದ್ದರಾಮಯ್ಯ ಕಾಮೆಂಟ್ ಗೆ ಈಗ ನೆಟ್ಟಿಗರು ಕಿಡಿ ಕಾರಿದ್ದಾರೆ. ಈಗಾಗಲೇ ಕಿರಣ್ ಮಜುಂದಾರ್ ಶಾ ಜೊತೆಗೆ ವಾಕ್ಸಮರ ನಡೆಸಿದ್ದೀರಿ. ಗೂಗಲ್ ಎಐ ಹಬ್ ಆಂಧ್ರ ಪಾಲಾಗಿದೆ. ಈಗ ಇನ್ಫೋಸಿಸ್ ನ್ನೂ ಕರ್ನಾಟಕದಿಂದ ಓಡಿಸಬೇಕೆಂದಿದ್ದೀರಾ? ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

ಮತ್ತೆ ಕೆಲವರು ಹೌದು, ಅವರು ಬೃಹಸ್ಪತಿಗಳೇ ಯಾಕೆಂದರೆ ಸಾವಿರಾರು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ. ಸಮಾಜ ಸೇವೆ ಮಾಡಿದ್ದಾರೆ. ಬಿಟ್ಟಿ ಭಾಗ್ಯ ಕೊಟ್ಟು ನಾನು ಕೊಟ್ಟೆ ಎಂದು ಹೇಳಿಲ್ಲ ಎಂದಿದ್ದಾರೆ. ಅಷ್ಟಕ್ಕೂ ಕೋರ್ಟ್ ಕಡ್ಡಾಯವಾಗಿ ಭಾಗವಹಿಸಬೇಕಾಗಿಲ್ಲ ಎಂದಿದ್ದಾರೆ. ಹೀಗಿರುವಾಗ ನೀವು ಈ ಹೇಳಿಕೆ ನೀಡುವುದು ಸರಿಯಲ್ಲ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿ ವಾಯುಮಾಲಿನ್ಯ ತಡೆಗೆ ಟಫ್‌ ರೂಲ್ಸ್‌ ಜಾರಿ: ವಾಹನಗಳಿಗೆ ಇಂಧನ ಬೇಕಿದ್ದರೆ ಈ ಪ್ರಮಾಣಪತ್ರ ಕಡ್ಡಾಯ

ವಿಜಯೇಂದ್ರ ಕಲೆಕ್ಷನ್ ಕಿಂಗ್, ಅವರಪ್ಪನ ಹೆಸರು ಕೆಡಿಸಿದ್ರು ಎಲ್ಲಾ ಬಿಚ್ಚಿಡಲಾ: ಡಿಕೆ ಶಿವಕುಮಾರ್ ಕ್ಲಾಸ್

ಕಂದಾಯ ಸಚಿವರ ಅಕ್ರಮಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ: ಬಿ.ವೈ.ವಿಜಯೇಂದ್ರ ಪ್ರಶ್ನೆ

Arecanut Price: ಅಡಿಕೆ ಬೆಲೆಯಲ್ಲಿ ಇಂದು ಇಳಿಕೆ

ಜವಹರಲಾಲ್ ನೆಹರೂ ದಾಖಲೆಗಳ ಪೆಟ್ಟಿಗೆಗಳು ಸೋನಿಯಾ ಗಾಂಧಿ ಬಳಿ: ಸಂಸತ್ ನಲ್ಲಿ ಸಚಿವ ಗಜೇಂದ್ರ ಸಿಂಗ್ ಬಾಂಬ್

ಮುಂದಿನ ಸುದ್ದಿ
Show comments