ಮೈಸೂರು: ನಾನೂ ಹಿಂದೂನೇ, ರಾಮಮಂದಿರ ಕಟ್ಟಿಸಿದ್ದೀನಿ. ಆದರೆ ಬಿಜೆಪಿಯವರಂತೆ ರಾಜಕೀಯಕ್ಕೆ ಬಳಸಲ್ಲ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಹುಟ್ಟೂರು ಸಿದ್ದರಾಮನಹುಂಡಿಯಲ್ಲಿ ಹೇಳಿಕೆ ನೀಡಿದ್ದಾರೆ.
ತಾವು ಕಲಿತ ಶಾಲೆಯ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯವರು ಧರ್ಮಸ್ಥಳ ಚಲೋ ಮಾಡುತ್ತಿರುವುದು ತಮ್ಮ ಲಾಭಕ್ಕಾಗಿ ಎಂದು ಅವರು ಟೀಕಿಸಿದ್ದಾರೆ.
ನಾನೂ ಹಿಂದೂನೇ. ನಮ್ಮೂರಿನಲ್ಲಿ ರಾಮಮಂದಿರ ಕಟ್ಟಿಸಿದ್ದೇನೆ. ಆದರೆ ಎಂದೂ ಇದನ್ನು ರಾಜಕೀಯಕ್ಕೆ ಬಳಸಿಕೊಂಡಿಲ್ಲ. ಹಿಂದೂಗಳು ಎಂದರೆ ಅಪಪ್ರಚಾರ, ಸುಳ್ಳು ಹೇಳುವುದು, ರಾಜಕೀಯ ಮಾಡುವುದಲ್ಲ. ಬಿಜೆಪಿಯವರಿಗೆ ರಾಜಕೀಯ ಲಾಭಕ್ಕಾಗಿ ಸುಳ್ಳು ಹೇಳುವುದು ಬಿಟ್ಟು ಬೇರೇನೂ ಗೊತ್ತಿಲ್ಲ ಎಂದಿದ್ದಾರೆ.