Publish Date: Fri, 01 Mar 2019 (20:55 IST)
Updated Date: Fri, 01 Mar 2019 (20:56 IST)
ಭಾರತವು ಪಾಕಿಸ್ತಾನದಲ್ಲಿನ ಸೈನಿಕರ ಅಥವಾ ಜನರ ಮೇಲೆ ದಾಳಿ ಮಾಡಿಲ್ಲ. ಉಗ್ರರ ಅಡಗುದಾಣಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಮಾಜಿ ಸಿಎಂ ಹೇಳಿದ್ದಾರೆ.
ವಿಜಯಪುರದಲ್ಲಿ ಮಾತನಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಉಗ್ರರ ನೆಲೆಗಳನ್ನು ಗುರುತಿಸಿ ಅವುಗಳ ಮೇಲೆ ನಮ್ಮ ಸೈನಿಕರು ದಾಳಿ ನಡೆಸಿದ್ದಾರೆ. ಪಾಕಿಸ್ತಾನದ ಸೈನಿಕರ ಮೇಲೆ ದಾಳಿ ಮಾಡಿಲ್ಲ ಎಂದರು.
ಪಾಕಿಸ್ತಾನದ ಅಟಾಟೋಪ ಹೆಚ್ಚಾಗುತ್ತಿದೆ. ನಮ್ಮ 44 ಯೋಧರನ್ನು ಬಲಿಪಡೆದುಕೊಂಡಿದ್ದಾರೆ. ಕಾಲು ಕೆರೆದುಕೊಂಡು ಜಗಳಕ್ಕೆ ಅಥವಾ ಯುದ್ಧಕ್ಕೆ ಬಂದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಈ ಹಿಂದೆ ಕೂಡ ಎರಡು ಬಾರಿ ಪಾಕಿಸ್ತಾನಕ್ಕೆ ಪಾಠ ಕಲಿಸಲಾಗಿತ್ತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.