Publish Date: Sat, 19 Nov 2022 (16:26 IST)
Updated Date: Sat, 19 Nov 2022 (17:41 IST)
ಬೆಂಗಳೂರು : ವೋಟರ್ ಡೇಟಾ ಹಗರಣ ಆರೋಪ ಸಂಬಂಧ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಯವರು ಮಾಡುತ್ತಿರುವ ಷಡ್ಯಂತ್ರ ಇಡೀ ದೇಶಕ್ಕೆ ಗೊತ್ತಾಗಿದೆ. ಲೆಟರ್ ಹೆಡ್, ಪ್ಯಾಡ್, ನೋಟ್ ಮೆಶಿನ್ ಎಲ್ಲಾ ಸಿಕ್ಕಿದೆ. ಕೂಡಲೇ ಅಶ್ವಥ್ ನಾರಾಯಣ್ ಅರೆಸ್ಟ್ ಮಾಡಬೇಕು. ಕೇಂದ್ರ ಚುನಾವಣಾ ಆಯೋಗದ ಮುಂದೆ ಹೋಗ್ತೀವಿ ಎಂದು ಸರ್ಕಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ವಾರ್ನಿಂಗ್ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ಕೊಟ್ಟಿದ್ದೇವೆ. ಬಿಜೆಪಿಯವರು ಮಾಡುತ್ತಿರುವ ಷಡ್ಯಂತ್ರ ಇಡೀ ದೇಶಕ್ಕೆ ಗೊತ್ತಾಗಿದೆ.
ಕೃಷ್ಣಪ್ಪ ರವಿಕುಮಾರ್ ಚಿಲುಮೆ ಸಂಸ್ಥೆಯ ಮಾಲೀಕ. ಇವನು ಪುಣ್ಯಾತ್ಮ ಅಲ್ಲ ದುರಾತ್ಮ. ಇವನೇ ಬಿಎಲ್ ಓಗಳನ್ನ ನೇಮಕ ಮಾಡಿಬಿಟ್ಟಿದ್ದಾನೆ. ಬೇಕಾದವ್ರನ್ನ ಸೇರಿಸಿ, ಬೇಡದವ್ರನ್ನ ಡಿಲೀಟ್ ಮಾಡಿದ್ದಾರೆ. ಇದೆಲ್ಲವನ್ನೂ ಕ್ಯಾನ್ಸಲ್ ಮಾಡಿಸಿ ಎಂದು ಆಗ್ರಹಿಸಿದರು.