ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿರುವುದಕ್ಕೆ ಕೈ ಪಡೆ ಮುಖಂಡರು ಹಾಗೂ ಹೈಕಮಾಂಡ್ ಗರಂ ಆಗಿದೆ. ಈ ನಡುವೆ ಮುಂಬೈಗೆ ಹಾರಿರೋ ಶಾಸಕರನ್ನು ಒಲಿಸಿಕೊಳ್ಳಲು ಕಾಂಗ್ರೆಸ್ ಕೊನೆ ದಾಳ ಉರುಳಿಸಿದೆ.
ಸಂವಿಧಾನದ 164 ರ ವಿಧಿ ಪ್ರಕಾರ ಹಾಗೂ ಪಕ್ಷಾಂತರ ಕಾಯ್ದೆ ವಿಧಿ 10 ರ ರಂತೆ ರಾಜೀನಾಮೆ ನೀಡಿರೋ ಕಾಂಗ್ರೆಸ್ ಶಾಸಕರ ವಿರುದ್ಧ ಪಕ್ಷ ವಿರೋಧ ಚಟುವಟಿಕೆಯ ಆರೋಪದ ಮೇರೆಗೆ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗುತ್ತಿದೆ.
ಹೀಗಂತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದು, ಅತೃಪ್ತ ಶಾಸಕರಿಗೆ ಕೊನೆ ಎಚ್ಚರಿಕೆಯನ್ನು ನೀಡಿದಂತಾಗಿದೆ.
ಕಾಂಗ್ರೆಸ್ ಚಿನ್ಹೆಯಿಂದ ಗೆದ್ದು ಶಾಸಕರಾಗಿರುವವರು ರಾಜೀನಾಮೆ ನೀಡಿದರೆ ಅವರನ್ನು ಅನರ್ಹಗೊಳಿಸಲು ಸಂವಿಧಾನ ಮತ್ತು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅವಕಾಶವಿದೆ. ಆ ಪ್ರಕಾರ ಸಭಾಧ್ಯಕ್ಷರಿಗೆ ದೂರು ಕೊಡ್ತೇವೆ ಅಂತ ಹೇಳಿದ್ರು.
ಶಾಸಕ ರಾಮಲಿಂಗಾರೆಡ್ಡಿಯವರನ್ನು ಹೊರತು ಪಡಿಸಿ ಉಳಿದ ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್ ಗೆ ಕೈ ಪಡೆ ಒತ್ತಾಯ ಮಾಡಲಿದೆ.