Publish Date: Sun, 08 Jan 2023 (08:36 IST)
Updated Date: Sun, 08 Jan 2023 (09:09 IST)
ಕೊಪ್ಪಳ: ಮೀಸಲಾತಿಗೆ ಸಿದ್ದರಾಮಯ್ಯ ಕೊಡುಗೆ ಏನೂ ಇಲ್ಲ. ಸಿದ್ದರಾಮಯ್ಯ ಬಡತನ ನಿರ್ಮೂಲನೆ ಮಾಡಲು ಏನೂ ಮಾಡಿಲ್ಲ ಎಂದು ಹೋರಾಟಗಾರ, ನಟ ಚೇತನ್ ಅಹಿಂಸಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊಪ್ಪಳದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮೀಸಲಾತಿಗೆ ಸಿದ್ದರಾಮಯ್ಯ ಕೊಡುಗೆ ಏನೂ ಇಲ್ಲ. ಸಿದ್ದರಾಮಯ್ಯ ಬಡತನ ನಿರ್ಮೂಲನೆ ಮಾಡಲು ಏನೂ ಮಾಡಿಲ್ಲ. ಸಿದ್ದರಾಮಯ್ಯ ಆರ್ಥಿಕ ಮರು ಹಂಚಿಕೆ ಮಾಡುವ ಉದ್ದೇಶ ಇಲ್ಲ. ಆದ್ರೆ ಅವರು ಹಿಂದುತ್ವ ವಿರೋಧ ಮಾಡುವುದು ಮಾತ್ರ ಒಪ್ಪಿತ ಎಂದು ಹೇಳಿದ್ದಾರೆ.
ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್-ಬಿಜೆಪಿ ಸಮಾನ ತಪ್ಪು ಮಾಡಿದ್ದಾರೆ. ಎರಡೂ ಪಕ್ಷಗಳು ಮೀಸಲಾತಿ ಸಮಾನವಾಗಿ ಹಂಚಿಕೆ ಮಾಡಿಲ್ಲ. ಸಿದ್ದರಾಮಯ್ಯ ಅವರ ಉದ್ದೇಶವೇನಿದ್ದರೂ ಬಿಜೆಪಿ ಸೋಲಿಸೋದು ಮಾತ್ರ. ಕಾಂಗ್ರೆಸ್ನ ಉದ್ದೇಶ ಅಧಿಕಾರ ಹಿಡಿಯುವುದು ಮಾತ್ರ ಎಂದು ಕಿಡಿ ಕಾರಿದ್ದಾರೆ.