Select Your Language

Notifications

webdunia
webdunia
webdunia
webdunia

ವಿಧಾನಪರಿಷತ್ ನಾಮನಿರ್ದೇಶನಕ್ಕೆ ಮೂರು ಹೆಸರುಗಳನ್ನ ಶಿಫಾರಸು ಮಾಡಿದ ಸಿಎಂ

ವಿಧಾನಪರಿಷತ್
ಬೆಂಗಳೂರು , ಮಂಗಳವಾರ, 25 ಏಪ್ರಿಲ್ 2017 (11:30 IST)
ವಿಧಾನಪರಿಷತ್`ನ ಮೂರು ಸ್ಥಾನಗಳಿಗೆ ನಾಮ ನಿರ್ದೇಶನಕ್ಕೆ ಮೂವರ ಹೆಸರನ್ನ ಸಿಎಂ ಸಿದ್ದರಾಮಯ್ಯ ಶಿಫಾರಸು ಮಾಡಿದ್ದಾರೆ. ಪಿ.ಆರ್. ರಮೇಶ್, ಮೋಹನ್ ಕೊಂಡಜ್ಜಿ ಮತ್ತು ಸಿಎಂ. ಲಿಂಗಪ್ಪ ಹೆಸರನ್ನ ಸಿಎಂ ಶಿಫಾರಸು ಮಾಡಿದ್ದಾರೆ.

ಕೆ.ಪಿ. ನಂಜುಂಡಿಗೆ ಅವಕಾಶ ಸಿಗುತ್ತೆ ಎಂಬ ನಿರೀಕ್ಷೆ ಇತ್ತು. ಆಸ್ಕರ್ ಫರ್ನಾಂಡಿಸ್ ವಿರೋಧದ ಹಿನ್ನೆಲೆಯಲ್ಲಿ ಪಟ್ಟಿಯಲ್ಲಿ ಅವಕಾಶ ಸಿಕ್ಕಿಲ್ಲ. 3ನೇ ಬಾರಿಗೂ ನಂಜುಂಡಿ ನಿರಾಸೆ ಅನುಭವಿಸಿದ್ದಾರೆ.

ಆದರೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನ ನಾಮ ನಿರ್ದೇಶನ ಮಾಡುವುದು ವಾಡಿಕೆ. ಇದೀಗ, ಸಿಎಂ ನಾಮ ನಿರ್ದೇಶನ ಮಾಡಿರುವ ಮೂವರೂ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವುದರಿಂದ ರಾಜ್ಯಪಾಲರು ಹೇಗೆ ಹೇಗೆ ಪರಿಗಣಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಈ ಸಂಬಂಧ ಕಾನೂನು ಸಚಿವ ಟಿ.ಬಿ. ಜಯಚಂದ್ರ ರಾಜ್ಯಪಾಲರನ್ನ ಭೇಟಿಯಾಗಿ ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

‘ಸರ್ಕಾರಿ ಕಾರ್ಯಕ್ರಮದ ಮೆನುವಿನಲ್ಲಿ ಮಾಂಸ ನಿಷೇಧಿಸಿ’