Webdunia - Bharat's app for daily news and videos

Install App

ರಾಜು ಕಾಗೆ ರಾಜೀನಾಮೆ ಕೊಡ್ತಾರಂತೆ ಎಂದರೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು

Krishnaveni K
ಸೋಮವಾರ, 23 ಜೂನ್ 2025 (14:53 IST)
ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧವೇ ಕಾಂಗ್ರೆಸ್ ಶಾಸಕ ರಾಜು ಕಾಗೆ ಬಂಡಾಯವೆದ್ದಿದ್ದಾರೆ. ರಾಜೀನಾಮೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಬಳಿ ಇಂದು ಕೇಳಿದಾಗ ಅವರು ಹೇಳಿದ್ದೇನು ಗೊತ್ತಾ?
 

ರಾಜ್ಯ ಸರ್ಕಾದ ವಿರುದ್ಧವೇ ಹಿರಿಯ ಶಾಸಕ ಬಿಆರ್ ಪಾಟೀಲ್ ಸಿಡಿದೆದ್ದ ಬೆನ್ನಲ್ಲೇ ರಾಜು ಕಾಗೆ ಕೂಡಾ ಆಕ್ರೋಶ ಹೊರಹಾಕಿದ್ದಾರೆ. ಮುಖ್ಯಮಂತ್ರಿಗಳ ಅನುದಾನದ ಅಡಿಯಲ್ಲಿ 25 ಕೋಟಿ ಅನುಮೋದನೆಯಾದರೂ ಹಣ ಬಿಡುಗಡೆಯಾಗಿಲ್ಲ. ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ. ಹೀಗೇ ಆದರೆ ಎರಡು ದಿನದಲ್ಲಿ ರಾಜೀನಾಮೆ ಕೊಡಬೇಕಾಗುತ್ತದೆ ಎಂದಿದ್ದರು.

ಅವರ ಹೇಳಿಕೆ ಈಗ ರಾಜ್ಯ ಸರ್ಕಾರದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಈ ಬಗ್ಗೆ ಇಂದು ಸಿಎಂ ಸಿದ್ದರಾಮಯ್ಯನವರನ್ನು ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಮಾಡಿವೆ. ಇದಕ್ಕೆ ಉತ್ತರಿಸಿದ ಅವರು ಇರಪ್ಪಾ ನಾನು ಕರೆದು ಮಾತನಾಡುತ್ತೇನೆ ಎಂದಿದ್ದಾರೆ.

‘ಏನು ಅನುದಾದ ಕೊಟ್ಟಿಲ್ವಂತೆ’ ಎಂದು ಮಾಧ್ಯಮಗಳಿಗೇ ಸಿಎಂ ಪ್ರಶ್ನೆ ಮಾಡುತ್ತಾರೆ. ಆಗ ಮುಖ್ಯಮಂತ್ರಿಗಳ ಅನುದಾನ ಎಂದಾಗ ‘ಮುಖ್ಯಮಂತ್ರಿಗಳ ಅನುದಾನ ಎಂದು ಎಲ್ಲಾದ್ರೂ ಇದ್ಯಾ? ವಿಶೇಷ ಅನುದಾನ ಅಂತ ಇದೆ. ಅದು ನಾನೀಗ ಕರೆದು ಮಾತನಾಡುತ್ತೇನೆ ಬಿಡಪ್ಪಾ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

79ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿರುವ ದೇಶಕ್ಕೆ ಬಾರೀ ಭದ್ರತೆ

ಮಹಾರಾಷ್ಟ್ರ ಭೀಕರ ಅಪಘಾತ: ದೇವಸ್ಥಾನಕ್ಕೆ ಹೊರಟು ಮಸಣ ಸೇರಿದ 7ಮಂದಿ

ಎಐ ತಂತ್ರವಲ್ಲ, ಮೆಟ್ರೋ ಹಳದಿ ಮಾರ್ಗದಲ್ಲೂ ಕೇಳಿಬರುತ್ತಿದೆ ಅಪರ್ಣಾ ಧ್ವನಿ, ಹೇಗೆ ಗೊತ್ತಾ

ಕಾಂಗ್ರೆಸ್‌ನಲ್ಲಿ ಸತ್ಯವಂತರಿಗೆ ಕಾಲವಲ್ಲ: ಶೋಭಾ ಕರಂದ್ಲಾಜೆ

ಕೆಎನ್‌ ರಾಜಣ್ಣ ರಾಜೀನಾಮೆ: ಸಂಚಲನ ಸೃಷ್ಟಿಸುತ್ತಿದೆ ಡಿಕೆಶಿ ಆಪ್ತನ ಹೇಳಿಕೆ

ಮುಂದಿನ ಸುದ್ದಿ
Show comments