Publish Date: Fri, 09 Oct 2020 (15:50 IST)
Updated Date: Fri, 09 Oct 2020 (15:54 IST)
ರಾಜ್ಯದಲ್ಲಿ ಡೆಡ್ಲಿ ಕೊರೊನಾ ಅಟ್ಟಹಾಸ ಮಿತಿಮೀರುತ್ತಿದೆ. ಈ ನಡುವೆ ಶಾಲೆಗಳನ್ನು ಈ ವರ್ಷ ಬಂದ್ ಮಾಡಬೇಕು.
ಹೀಗಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ ಮಾಡಿದ್ದಾರೆ.
ಕೊರೊನಾ ವೈರಸ್ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವವರೆಗೂ ಶಾಲೆ ಆರಂಭಿಸಬಾರದು.
ಮಕ್ಕಳನ್ನು ಮುಂದಿನ ಕ್ಲಾಸ್ ಗೆ ಪಾಸ್ ಮಾಡಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರಕಾರಕ್ಕೆ ಪತ್ರ ಬರೆದಿದ್ದಾರೆ.
ಆನ್ ಲೈನ್ ತರಗತಿಗಳೇ ಮುಂದುವರಿಯಲಿ, ಎಲ್ಲ ಮಕ್ಕಳಿಗೆ ಆನ್ ಲೈನ್ ವ್ಯವಸ್ಥೆಯನ್ನು ಸರಕಾರ ಕಲ್ಪಿಸಬೇಕೆಂದಿದ್ದಾರೆ.