ಯಡಿಯೂರಪ್ಪ ಸಿಎಂ ಆಗಿದ್ದಾಗ ರಾಜೀನಾಮೆ ಕೊಡಬೇಕು ಅಂದಿದ್ದ ಸಿದ್ದರಾಮಯ್ಯ ಈಗ ತಾವು ಕೊಡೋದೇ ಇಲ್ಲ ಅಂದ್ರು

Krishnaveni K
ಬುಧವಾರ, 25 ಸೆಪ್ಟಂಬರ್ 2024 (10:20 IST)
Photo Credit: Facebook
ಬೆಂಗಳೂರು: ಈ ಹಿಂದೆ ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರ ಮೇಲೆ ಆರೋಪ ಬಂದಾಗ ಇದೇ ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ನಡೆಸಿ ತನಿಖಾ ಸಂಸ್ಥೆಗಳೆಲ್ಲಾ ಅವರ ಕೈಯಲ್ಲಿರುವ ಕಾರಣ ರಾಜೀನಾಮೆ ಕೊಡಬೇಕು ಎಂದಿದ್ದರು! ಆದರೆ ಈಗ ತಮ್ಮ ಮೇಲೆ ಆಪಾದನೆ ಬಂದಾಗ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಅಂತಿದ್ದಾರೆ.

ಈ ಹಿಂದೆ ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪ ಬಂದಾಗ ಪತ್ರಿಕಾಗೋಷ್ಠಿ ನಡೆಸಿದ್ದ ಸಿದ್ದರಾಮಯ್ಯ, ‘ಈಗ ಚೀಫ್ ಮಿನಿಸ್ಟರ್ ಯಾರು? ಯಾರ ಕೈಯಲ್ಲಿ ಆಡಳಿತವಿದೆ? ಹಾಗಿದ್ದ ಮೇಲೆ ಯಾರು ರಾಜೀನಾಮೆ ಕೊಡಬೇಕು?’ ಎಂದು ತಮ್ಮದೇ ಶೈಲಿಯಲ್ಲಿ ಟಾಂಗ್ ಕೊಟ್ಟಿದ್ದರು.

ಸಿಎಂ ಆಗಿದ್ದ ಯಡಿಯೂರಪ್ಪ ಕೈಯಲ್ಲೇ ತನಿಖಾ ಸಂಸ್ಥೆಗಳಿರುವುದರಿಂದ ತನಿಖೆ ದಿಕ್ಕು ತಪ್ಪಿಸುವ ಕೆಲಸ ಆಗಬಹುದು. ಹೀಗಾಗಿ ಯಡಿಯೂರಪ್ಪ ರಾಜೀನಾಮೆ ನೀಡಲೇಬೇಕು ಎಂದು ಸಿದ್ದರಾಮಯ್ಯ ಒತ್ತಾಯ ಮಾಡಿದ್ದರು. ಆದರೆ ಈಗ ತಮ್ಮ ಮೇಲೆ ಆಪಾದನೆ ಬಂದಾಗ ರಾಜೀನಾಮೆ ಕೊಡುವುದೇ ಇಲ್ಲ ಎಂದಿದ್ದಾರೆ.

ಅಂದು ಯಡಿಯೂರಪ್ಪನವರ ಪರಿಸ್ಥಿತಿಯೂ ಇಂದು ಸಿದ್ದರಾಮಯ್ಯನವರ ಪರಿಸ್ಥಿತಿಯೂ ಒಂದೇ. ಅಂದು ಯಡಿಯೂರಪ್ಪನವರ ರಾಜೀನಾಮೆ ಕೇಳಿದ್ದ ಇದೇ ಸಿದ್ದರಾಮಯ್ಯನವರು ಇಂದು ರಾಜೀನಾಮೆಯೇ ನೀಡಲ್ಲ ಎನ್ನುತ್ತಿರುವುದು ವಿಪರ್ಯಾಸ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಹಾರ ಗೆಲ್ಲುತ್ತಿದ್ದಂತೇ ಕಾರ್ಯಕರ್ತರಿಗೆ ಮುಂದಿನ ನಾಲ್ಕು ಟಾರ್ಗೆಟ್ ನೀಡಿದ ಪ್ರಧಾನಿ ಮೋದಿ

ಸಾಲುಮರದ ತಿಮ್ಮಕ್ಕನ ಕೊನೆಯ ಆಸೆ ಈಡೇರಿಸಲು ಮುಂದಾದ ಸಿಎಂ ಸಿದ್ದರಾಮಯ್ಯ

ಬಿಹಾರದಲ್ಲಿ ಕೇವಲ 2 ಸ್ಥಾನದಲ್ಲಿ ಮುನ್ನಡೆ, ರಾಹುಲ್ ಗಾಂಧಿಗೆ ಇದು 95 ನೇ ಸೋಲು

ಬಿಜೆಪಿಗೆ ನೆಹರೂ, ಗಾಂಧೀಜಿಯನ್ನು ತೆಗಳುವುದೇ ಕೆಲಸ: ಸಿದ್ದರಾಮಯ್ಯ

ಬಿಹಾರ ಚುನಾವಣೆ ಗೆದ್ದಿದ್ದಕ್ಕೆ ಲಾಡು ಹಂಚಿ ಥಕಥೈ ಕುಣಿದ ಕರ್ನಾಟಕ ಬಿಜೆಪಿ ನಾಯಕರು

ಮುಂದಿನ ಸುದ್ದಿ
Show comments