Select Your Language

Notifications

webdunia
webdunia
webdunia
webdunia

ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಮಂಗಲ ಗೋಯಾತ್ರೆ ಶುಭಾರಂಭ

ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಮಂಗಲ ಗೋಯಾತ್ರೆ ಶುಭಾರಂಭ
ಬೆಂಗಳೂರು , ಸೋಮವಾರ, 7 ನವೆಂಬರ್ 2016 (20:26 IST)
ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಅನೇಕ ಗೋಸಂಬಂಧಿ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಗೋಜಾಗೃತಿ ಮೂಡಿಸುತ್ತಿದ್ದು, ಪ್ರಸ್ತುತ ಗೋವಿಗಾಗಿ, ದೇಶಕ್ಕಾಗಿ ಪ್ರಾಣಾರ್ಪಣೆಯನ್ನು ಮಾಡಿದ ಮಂಗಲಪಾಂಡೆಯ ಸ್ಪೂರ್ತಿಯಲ್ಲಿ ’ಮಂಗಲ ಗೋಯಾತ್ರೆ’ಯನ್ನು ಸಂಕಲ್ಪಿಸಿದ್ದಾರೆ.
 
 ಸಪ್ತರಾಜ್ಯಗಳಲ್ಲಿ ಸಂಚರಿಸುವ ಮಂಗಲ ಗೋಯಾತ್ರೆ ನವೆಂಬರ್ 8 ರಂದು ಆರಂಭಗೊಳ್ಳಲಿದ್ದು, ಬೆಂಗಳೂರಿನ ರಾಜರಾಜೇಶ್ವರೀ ನಗರದ ಮುನಿವೆಂಕಟಯ್ಯ ರಂಗಮಂದಿರ, ಐಡಿಯಲ್ ಹೋಮ್ಸ್ ಬಡಾವಣೆಯಲ್ಲಿ  ಬೃಹತ್ ಕಾರ್ಯಕ್ರಮ ನಡೆಯಲಿದೆ.

ಅಪರಾಹ್ನ 4.00ಗಂಟೆಗೆ ಆರಂಭವಾಗಲಿರುವ ಈ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಸಂತರು ಹಾಗೂ ಸಾಮಾಜಿಕ ಕಾರ್ಯಕರ್ತರು ಭಾಗವಹಿಸಲಿದ್ದು, ಇದೇ ಸಂದರ್ಭದಲ್ಲಿ 1008 ಗೋ ಪೂಜೆಯನ್ನು ಆಯೋಜಿಸಲಾಗಿದ್ದು, ಸಾವಿರಾರು ಸಂಖ್ಯೆಯ ಗೋಪ್ರೇಮಿಗಳು ಸಾಕ್ಷಿಯಾಗಲಿದ್ದಾರೆ.
 
ಮಂಗಲ ಗೋಯಾತ್ರೆ - ಶುಭಾರಂಭ ಕಾರ್ಯಕ್ರಮಕ್ಕೆ ತಮ್ಮ ಮಾಧ್ಯಮದ ಪ್ರತಿನಿಧಿಗಳನ್ನು ಕಳಿಸಿ, ಮಾಧ್ಯಮಗಳಲ್ಲಿ ಬಿತ್ತರಿಸಿ ಕಾರ್ಯಕ್ರಮವನ್ನು ನಾಡಿನ ಎಲ್ಲ ಜನತೆಗೆ ಮುಟ್ಟಿಸಬೇಕಾಗಿ ಕೋರಿಕೊಳ್ಳುತ್ತೇವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

'ಕೈ' ಬಿಟ್ಟು 'ತೆನೆ' ಹೊರುವುದಿಲ್ಲ: ಸತೀಶ್ ಜಾರಕಿಹೊಳಿ