Select Your Language

Notifications

webdunia
webdunia
webdunia
webdunia

ಸಾವಿನ ಮನೆಯಲ್ಲಿ ರಾಜಕಾರಣ ಮಾಡಬಾರದು– ಸಿಎಂ

ಸಿದ್ದರಾಮಯ್ಯ
ಸಾವಿನ ಸಂದರ್ಭದಲ್ಲಿ ಶವದ ಮೇಲೆ ರಾಜಕಾರಣ ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರಾದರೂ ಸಾವನ್ನಪ್ಪಿದಾಗ ಸಾಂತ್ವಾನ ಹೇಳಬೇಕು. ಆದರೆ, ರಾಜಕಾರಣ ಮಾಡಬಾರದು ಎಂದಿದ್ದಾರೆ.
 
ದ್ವೇಷದ ರಾಜಕಾರಣ ಮಾಡುವುದಕ್ಕೆ ಕೊನೆ ಎಂಬುದು ಇಲ್ಲ. ಆದರೆ, ಧಾರ್ಮಿಕ ಭಾವನೆಗಳನ್ನು ಕೆರಳಿಸುವುದರಿಂದ ಸಮಾಜಕ್ಕೆ ಹಾನಿಯಾಗಲಿದೆ ಎಂದು ತಿಳಿಸಿದ್ದಾರೆ.
 
ಯಾವುದೇ ರಾಜಕೀಯ ಪಕ್ಷಗಳಾಗಲಿ, ಸಂಘಟನೆಗಳಾಗಲಿ ಘರ್ಷಣೆಗೆ ಪ್ರಚೋದಿಸಬಾರದು. ಸಮಾಜದಲ್ಲಿ ಶಾಂತಿ-ಸಾಮರಸ್ಯ ಕಾಪಾಡಲು ಪ್ರಯತ್ನಿಸಬೇಕು. ಬಶೀರ್ ಮೇಲಿನ ಹಲ್ಲೆ ಹಾಗೂ ದೀಪಕ್ ರಾವ್ ಹತ್ಯೆ ಪ್ರಕರಣಗಳನ್ನು ಪಕ್ಷಾತೀತವಾಗಿ ಖಂಡಿಸಬೇಕು. ಆದರೆ, ಬಿಜೆಪಿ ಒಬ್ಬರು ಸತ್ತ ತಕ್ಷಣ ಪ್ರತಿಭಟನೆ ಮಾಡುತ್ತಾರೆ ಎಂದಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ನಾಯಕರು ವಿಕೃತ ಮನೋಭಾವ ಬಿಡಲಿ: ರಾಮಲಿಂಗಾ ರೆಡ್ಡಿ