Select Your Language

Notifications

webdunia
webdunia
webdunia
webdunia

ಶಾರ್ಟ್ ಸರ್ಕ್ಯೂ‌ಟ್‌‌ಗೆ 24 ಅಂಗಡಿ ಭಸ್ಮ

ಶಾರ್ಟ್ ಸರ್ಕ್ಯೂ‌ಟ್‌‌ಗೆ 24 ಅಂಗಡಿ ಭಸ್ಮ
ದಾವಣಗೆರೆ , ಸೋಮವಾರ, 31 ಅಕ್ಟೋಬರ್ 2016 (13:18 IST)
ಶಾರ್ಟ್ ಸರ್ಕ್ಯೂ‌ಟ್‌ನಿಂದಾಗಿ 24 ತರಕಾರಿ ಅಂಗಡಿಗಳು ಸುಟ್ಟು ಭಸ್ಮವಾಗಿರುವ ಘಟನೆ ದಾವಣಗೆರೆಯ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಭಾನುವಾರ-ಸೋಮವಾರದ ನಡುವಿನ ರಾತ್ರಿ ನಡೆದಿದೆ.
 
ನಗರದ ಹೊಸ ಬಸ್ ನಿಲ್ದಾಣದ ಎದುರಿಗೆ ಇರುವ ಎಪಿಎಂಸಿ ಮಳಿಗೆಯಲ್ಲಿ ಈ ದುರಂತ ಸಂಭವಿಸಿದ್ದು, ಸುಮಾರು ಮೂರು ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ರಾತ್ರಿ ವ್ಯಾಪಾರಿಗಳು ತಮ್ಮ ತಮ್ಮ ಅಂಗಡಿಗಳಲ್ಲಿ ಲಕ್ಷ್ಮಿ ಪೂಜೆ ಮಾಡಿ ಬಾಗಿಲು ಹಾಕಿ ಮನೆಗೆ ಹೋದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.ಆ ಸಮಯದಲ್ಲಿ ಅಂಗಡಿಗಳಲ್ಲಿ ಯಾರು ಕೂಡ ಇರಲಿಲ್ಲವಾದ್ದರಿಂದ ಪ್ರಾಣಾಪಾಯ ಸಂಭವಿಸಿಲ್ಲ. 
 
ಒಂದು ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂ‌ಟ್‌‌ನಿಂದ ಹೊತ್ತಿಕೊಂಡ ಬೆಂಕಿ ಉಳಿದ 23 ಅಂಗಡಿಗಳಿಗೆ ವ್ಯಾಪಿಸಿದೆ. ದಾವಣಗೆರೆಯಿಂದ 5 ಮತ್ತು ಚಿತ್ರದುರ್ಗದ 1 ಒಟ್ಟು 6 ಅಗ್ನಿಶಾಮಕ ದಳಗಳು ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿವೆ.
 
ಸತತ ಎರಡು ಗಂಟೆಗಳ ಪರಿಶ್ರಮದಿಂದ ಬೆಂಕಿಯನ್ನು ತಹಬಂದಿಗೆ ತರಲಾಗಿದೆ. 
 
ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
 
ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಪಿಎಫ್‌ಐ, ಆರೆಸ್ಸೆಸ್ ಒಂದೇ ನಾಣ್ಯದ ಎರಡು ಮುಖಗಳು: ಸಿಎಂ ಸಿದ್ದರಾಮಯ್ಯ