Publish Date: Wed, 24 Jan 2018 (15:12 IST)
Updated Date: Wed, 24 Jan 2018 (15:28 IST)
ಮುಂಬೈ: ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ದಕ್ಷಿಣ ಮುಂಬೈನ ನಾಗಪಾಡದಲ್ಲಿ ನಡೆದ ರಾಲಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಅವರ ಮೇಲೆ ಅಪರಿಚಿತರೊಬ್ಬರು ಬೂಟು ಎಸೆದಿದ್ದಾರೆ.
ಈ ಘಟನೆಯು ನಿನ್ನೆ (ಮಂಗಳವಾರ) ರಾತ್ರಿ ವೇಳೆಯಲ್ಲಿ ಸಂಭವಿಸಿತು ಬೂಟು ಎಸೆತದಿಂದ ಓವೈಸಿಗೆ ಗಾಯಗಳೇನು ಆಗಲಿಲ್ಲ. ಆದರೆ ‘ಬೂಟು ಎಸೆಯುವವರು ಗಾಂಧಿ ಹಂತಕರ ಹಿಂಬಾಲಕರು' ಎಂದು ಓವೈಸಿ ಅದೇ ಕೂಡಲೇ ಪ್ರತಿಕ್ರಿಯೆ ನೀಡಿದರು.
ಈ ಘಟನೆಯಿಂದ ವಿಚಲಿತರಾಗದ ಓವೈಸಿ, ನನ್ನ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ನಾನು ನನ್ನ ಜೀವವನ್ನೇ ಅರ್ಪಿಸಲು ಸಿದ್ಧನಿದ್ದೇನೆ. ಇಂತಹ ಹೀನ ಕೃತ್ಯ ಎಸಗುವವರೆಲ್ಲ ಜೀವನದಲ್ಲಿ ಹತಾಶ ವ್ಯಕ್ತಿಗಳು ಎಂದು ಓವೈಸಿ ಕಿಡಿಕಾರಿದ್ದಾರೆ.
ಇನ್ನು ಪೊಲೀಸರು ಸಿಸಿಟಿವಿಯನ್ನು ಪರಿಶೀಲನೆ ನಡೆಸುತ್ತಿದ್ದು ಬೂಟು ಎಸೆದ ವ್ಯಕ್ತಿ ಯಾರೆಂಬುದನ್ನು ಹುಡುಕಾಡುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ