ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೆ ರಾಜ್ಯದ ಜನರಿಗೆ 5 ಉಚಿತ ಯೋಜನೆಗಳನ್ನ ನೀಡುವುದಾಗಿ ಭರವಸೆ ನೀಡಿತ್ತು. ಅದರಂತೆ ಅಧಿಕಾರಕ್ಕೆ ಬಂದ ಮೇಲೆ ಐದು ಯೋಜನೆಗಳಲ್ಲಿ ನಾಲ್ಕು ಯೋಜನೆಗಳನ್ನು ಈಗಾಗಲೇ ಯಶಸ್ವಿಯಾಗಿ ಜಾರಿತಂದಿದೆ. ಇನ್ನು ಯೋಜನೆಗಳನ್ನು ಜಾರಿ ಮಾಡಿದ ಬಳಿಕ ಹಲವು ವಸ್ತುಗಳು ಹಾಗೂ ಇನ್ನಿತರ ಬೆಲೆಗಳನ್ನ ಹೆಚ್ಚಳ ಮಾಡಲಾಗಿತ್ತು. ಅದರಂತೆ ಮಧ್ಯದ ದರವು ಕೂಡ ಶೇಕಡ 20 % ರಷ್ಟು ಹೆಚ್ಚಳ ಮಾಡುವ ಮೂಲಕ ಮಧ್ಯ ಪ್ರೀಯರಿಗೆ ಸರ್ಕಾರ ಶಾಕ್ ನೀಡಿತ್ತು. ಇನ್ನು ಮದ್ಯದ ದರ ಹೆಚ್ಚಳದಿಂದ ತಮ್ಮ ಬ್ರಾಂಡ್ ಗಳನ್ನು ಬದಲಿಸಿದ್ರು, ಸ್ಕಾಚ್ ಕುಡಿಯುತ್ತಿದ್ದವರು ಪ್ರೀಮಿಯಂ ಬ್ರಾಂಡ್, ಪ್ರೀಮಿಯಂ ಬ್ರಾಂಡ್ ಸೇವಿಸುತ್ತಿದ್ದವರು ಅದಕ್ಕಿಂತ ಕೆಳಗಿನ ಬ್ರಾಂಡ್ ಖರೀದಿಸುತ್ತಿದ್ದಾರೆ. ಮಧ್ಯದರ ಹೆಚ್ಚಳದಿಂದಾಗಿ ಮಧ್ಯಪ್ರಿಯರು ತಮ್ಮ ಬ್ರಾಂಡ್ ಬದಲಿಸಿದ್ದು, ಮಾಧ್ಯ ಸೇವನೆಗೆ ಇದರಿಂದಾಗಿ ಹೆಚ್ಚಿನ ದರ ಇರುವ ಮಧ್ಯದ ಬಾಟಲಿಗಳು ಸೇಲ್ ಆಗ್ತಾ ಇಲ್ಲ ಅಂತ ಅಂಗಡಿ ಮಾಲೀಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಇನ್ನೂ ಬಜೆಟ್ ನಲ್ಲಿ ಅಬಕಾರಿ ಸುಂಕ ಹೆಚ್ಚಳ ಮಾಡಿದ್ದು, ಬಿಯರ್ ಗೆ ಶೇಕಡ 10ರಷ್ಟು, ಉಳಿದ ಮದ್ಯಕ್ಕೆ ಶೇಕಡ 20ರಷ್ಟು ಸುಂಕ ಹೆಚ್ಚಳ ಮಾಡಲಾಗಿತ್ತು. ಮದ್ಯದ ದರ ಏರಿಕೆಯಾಗಿರುವುದರಿಂದ ಮದ್ಯ ಮಾರಾಟದಲ್ಲಿ ತೀವ್ರ ಕುಸಿತ ಕಂಡಿದ್ದು, ಆಗಸ್ಟ್ ನಲ್ಲಿ ಶೇಕಡ 10 ರಿಂದ 15 ರಷ್ಟು ಮಧ್ಯ ಮಾರಾಟ ಕಡಿಮೆ ಮಾರಾಟವಾಗಿದೆ. ಇನ್ನೂ ಜುಲೈನಲ್ಲಿ 3.556.25 ಕೋಟಿ ರೂ. ಮೌಲ್ಯದ ಬಿಯರ್ ಸೇರಿರಿದಂತೆ ಎಲ್ಲ ಬಗೆಯ ಮದ್ಯ ಮಾರಾಟವಾಗಿತ್ತು. ಆಗಸ್ಟ್ ತಿಂಗಳ 15 ದಿನಗಳಲ್ಲಿ 1,302.90 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದ್ದು, ಅಬಕಾರಿ ಇಲಾಖೆಯಲ್ಲಿ ಬಾರಿ ಪ್ರಮಾಣದ ಇಳಿಕೆ ಕಂಡಿದೆ.ಇನ್ನೂ ಕೆಲವೆಡೆ ನಕಲಿ ಮದ್ಯ ಮಾರಾಟ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದೂ, ಇದರಿಂದಾಗಿನೇ ಇಲಾಖೆಯ ಬೊಕ್ಕಸಕ್ಕೆ ಕತ್ತರಿ ಬಿದ್ದಿದೆ ಎಂದು ತಿಳಿದುಬಂದಿದಿದೆ.