Select Your Language

Notifications

webdunia
webdunia
webdunia
webdunia

ಶೋಬಾ ಕರಂದ್ಲಾಜೆ ಜವಾಬ್ದಾರಿಯಿಂದ ವರ್ತಿಸಲಿ: ಸಚಿವ ಖಾದರ್ ಕಿಡಿ

ಶೋಬಾ ಕರಂದ್ಲಾಜೆ ಜವಾಬ್ದಾರಿಯಿಂದ ವರ್ತಿಸಲಿ: ಸಚಿವ ಖಾದರ್ ಕಿಡಿ
ಬೆಳಗಾವಿ , ಶನಿವಾರ, 22 ಜುಲೈ 2017 (13:33 IST)
ಬಿಜೆಪಿ ನಾಯಕಿ ಮಾಜಿ ಸಚಿವ ಯಾವುದೇ ವಿಷಯದ ಬಗ್ಗೆ ಜವಾಬ್ದಾರಿಯಂದ ವರ್ತಿಸುವುದು ಸೂಕ್ತ ಎಂದು ,ಚಿವ ಯು.ಟಿ.ಖಾದರ್ ತಿರುಗೇಟು ನೀಡಿದ್ದಾರೆ.
 
ಮಂಗಳೂರಿನ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಪ್ರಕರಣನ್ನು ಎನ್‌ಐಎ ತನಿಖೆಗೆ ಒಪ್ಪಿಸಬೇಕು ಎನ್ನುವ ಕರಂದ್ಲಾಜೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು , ಸರಕಾರ ಈಗಾಗಲೇ ಕೆಲವು ಪ್ರಕರಣಗಳನ್ನು ಎನ್‌ಐಎಗೆ ಒಪ್ಪಿಸಲಾಗಿದೆ ಎಂದರು.
 
ಎನ್‍‌ಐಎ ವಿಭಾಗಕ್ಕೆ ಯಾವುದೇ ಪ್ರಕರಣ ವಹಿಸಲು ಕೆಲವು ನಿಯಮಗಳಿವೆ ಎಲ್ಲಾ ಪ್ರಕರಣಗಳನ್ನು ಎನ್‌ಐಎಗೆ ಒಪ್ಪಿಸಲು ಸಾಧ್ಯವಿಲ್ಲ ಎಂದು ತಳ್ಳಿಹಾಕಿದ್ದಾರೆ.
 
ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಮೇಲೆ ನಡೆದ ಪ್ರಕರಣದ ಬಗ್ಗೆ ಕರಂದ್ಲಾಜೆ ಯಾಕೆ ಎನ್‌ಐಎಗೆ ಒಪ್ಪಿಸುವಂತೆ ಹೇಳುತ್ತಿಲ್ಲ. ಕೇವಲ ಪ್ರಚಾರಕ್ಕಾಗಿ ಮಾತನಾಡಿದರೆ ಸಾಲದು. ಅದರಲ್ಲಿ ಸತ್ಯಾಂಶವು ಇರಬೇಕು ಎಂದು ಸಚಿವ ಖಾದರ್, ಶೋಭಾ ಕರಂದ್ಲಾಜೆಗೆ ಲೇವಡಿ ಮಾಡಿದ್ದಾರೆ.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಂವಿಧಾನ ಸರಿಯಾಗಿ ಓದಲ್ಲ, ಕಾನೂನು ತಿಳಿದುಕೊಳ್ಳಲ್ಲ: ಬಿಜೆಪಿಗೆ ಸಿಎಂ ಟಾಂಗ್