Webdunia - Bharat's app for daily news and videos

Install App

ತಮ್ಮದೇ ಸರ್ಕಾರವನ್ನು ಬೈದ ಶಿವಾನಂದ ಪಾಟೀಲ್: ಸುಮ್ನೇ ಬಿಡುತ್ತಾ ಹೈಕಮಾಂಡ್

Krishnaveni K
ಶುಕ್ರವಾರ, 29 ಆಗಸ್ಟ್ 2025 (12:12 IST)
ಬೆಂಗಳೂರು: ಕೃಷಿ ಸಚಿವ ಶಿವಾನಂದ ಪಾಟೀಲ್ ಈಗ ತಮ್ಮದೇ ಸರ್ಕಾರವನ್ನು ಬೈದು ಕುಮಾರಸ್ವಾಮಿಯವರನ್ನು ಹೊಗಳಿ ಸುದ್ದಿಯಲ್ಲಿದ್ದಾರೆ. ಅವರನ್ನು ಸುಮ್ನೇ ಬಿಡುತ್ತಾ ಹೈಕಮಾಂಡ್ ಎನ್ನುವುದೇ ಈಗಿರುವ ಪ್ರಶ್ನೆ.

ಮೊನ್ನೆಯಷ್ಟೇ ರಾಹುಲ್ ಗಾಂಧಿ ವೋಟ್ ಚೋರಿ ಅಭಿಯಾನದ ವಿರುದ್ಧ ಮಾತನಾಡಿದ್ದಕ್ಕೆ ಹಿರಿಯ ನಾಯಕ ಎನ್ನುವುದನ್ನೂ ನೋಡದೇ ಕೆಎನ್ ರಾಜಣ್ಣ ಅವರನ್ನು ಪದಚ್ಯುತಗೊಳಿಸಲಾಗಿತ್ತು. ರಾಹುಲ್ ಗಾಂಧಿಯೇ ಖುದ್ದಾಗಿ ಅವರ ಪದಚ್ಯುತಿಗೆ ಸೂಚಿಸಿದ್ದರು.

ಈ ಮೂಲಕ ಕಾಂಗ್ರೆಸ್ ಹೈಕಮಾಂಡ್ ಬಹಿರಂಗವಾಗಿ ನಾಲಿಗೆ ಹರಿಬಿಡುವವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳುವುದಾಗಿ ಖಡಕ್ ಸಂದೇಶ ರವಾನಿಸಿತ್ತು.  ಇದಾದ ಬಳಿಕ ಕಾಂಗ್ರೆಸ್ ನಾಯಕರು ನಾಲಿಗೆ ಹರಿಬಿಡುವುದು ಕೊಂಚ ಮಟ್ಟಿಗೆ ಕಡಿಮೆಯಾಗಿತ್ತು. ಆದರೆ ಈಗ ಮತ್ತೆ ಶಿವಾನಂದ ಪಾಟೀಲ್ ಅದೇ ತಪ್ಪು ಮಾಡಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ್ದ ಶಿವಾನಂದ ಪಾಟೀಲ್ ಪಿಪಿಪಿ ಮಾದರಿಯ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವ ತಮ್ಮದೇ ಸರ್ಕಾರದ ನಿರ್ಧಾರದ ವಿರುದ್ಧ ಕಿಡಿ ಕಾರಿದ್ದಾರೆ. ವಿಶೇಷವೆಂದರೆ ಅವರು ಇದೇ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರದ ಸಿಎಂ ಆಗಿದ್ದಾಗ ಕುಮಾರಸ್ವಾಮಿಯವರು ನಮ್ಮ ಜಿಲ್ಲೆಗೆ ಅನುಕೂಲ ಮಾಡಿದ್ದರು ಎಂದು ಹೊಗಳಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೆ.16ರಂದು ಮಂಗಳೂರು ನಗರದಲ್ಲಿ ಪೂರೈಕೆಯಾಗಲ್ಲ ನೀರು

ಮಲೆ ಮಹದೇಶ್ವರನ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಗುಡ್‌ನ್ಯೂಸ್‌

ಮೋದಿ ತಾಯಿಯ ಡೀಪ್‌ಫೇಕ್ ವಿಡಿಯೋ: ಕಾಂಗ್ರೆಸ್ ನಾಯಕರ ವಿರುದ್ಧ ಎಫ್‌ಐಆರ್‌

ನೇಪಾಳ: ಸಾರ್ವತ್ರಿಕ ಚುನಾವಣೆಗೆ ಮುಹೂರ್ತ ಫಿಕ್ಸ್‌

ದೆಹಲಿಯಲ್ಲಿ ಮನಗೆಲ್ಲುತ್ತಿದೆ ಕರಾವಳಿಯ ಸಿಗ್ನೇಚರ್ ಖಾದ್ಯಗಳು

ಮುಂದಿನ ಸುದ್ದಿ
Show comments