Select Your Language

Notifications

webdunia
webdunia
webdunia
webdunia

ಮನರೇಗಾ ವಿಚಾರದಲ್ಲಿ ಚರ್ಚೆಗೆ ಆಹ್ವಾನಿಸಿದ ಎಚ್‌ಡಿಕೆಗೆ ಶಿವಕುಮಾರ್ ತಿರುಗೇಟು

DCM HD Kumaraswamy
ಬೆಂಗಳೂರು: ಮನರೇಗಾ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಸವಾಲೆಸಿದರುವ ಎಚ್‌ಡಿ ಕುಮಾರಸ್ವಾಮಿಗೆ ಇದೀಗ ಪಂಥಾಹ್ವಾನ ಮಾಡಿರುವುದಾಗಿ ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದರು. 

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಪಂಥಾಹ್ವಾನ ಸ್ವೀಕರಿಸಿದ್ದೇನೆ. ನಾನು ಯಾವಾಗ ಬೇಕಾದ್ರೂ ರೆಡಿ ಇದ್ದಿದ್ದು, ಅವರ ಜತೆ ಸಾರ್ವಜನಿಕ ಚರ್ಚೆಗೂ ಸಿದ್ದ, ಇಲ್ಲದಿದ್ದರೆ ಟಿವಿಯಲ್ಲಿ ಚರ್ಚೆಗೂ ಸಿದ್ದ ಸಿದ್ದ.  ವಿಧಾನಸಭೆಯಲ್ಲಾದ್ರೂ ಚರ್ಚೆಗೆ ಬರಲಿ. ಅವರು ಯಾವಾಗ ಹೇಳ್ತಾರೆ ಹೇಳಿ, ನಾನು ಡಿಬೆಟ್‌ಗೆ ರೆಡಿ. ಅವರ ಪಂಥಾಹ್ವಾನ ಸ್ವೀಕಾರ ಮಾಡಿದ್ದೇನೆ ಎಂದು ತಿಳಿಸಿದರು. 

ಇನ್ನೂ ನಾನು ಅವರನ್ನು ಸೀರಿಯಸ್ ಆಗಿ ತೆಗೆದುಕೊಂಡಿಲ್ಲ. ಬರೀ ಡೈಲಾಗ್ ಹೇಳೋದು, ಹೇಳಿಕೆಗಳನ್ನು ನೀಡುವುದು.

ಅದು ಆಯ್ತು ಬಿಡಿ ಡಿಬೇಟ್‌ಗೆ ಯಾವಾಗ ಟೈಂ ಫಿಕ್ಸ್ ಮಾಡ್ತೀರಾ. ನಾನು ನೋಡಪ್ಪ ಯಾವಾಗ ಬೇಕಿದ್ರು ರೆಡಿ. ನನಗೆ 3 ದಿನ ಟೈಂ ಕೊಡಿ ಅಷ್ಟೆ. ಇವತ್ತು ಸಂಜೆಯೇ ಬೇಕಿದ್ರೆ ಕರೀರಿ, ನಾನು ರೆಡಿ. ನನಗೆ ಯಾವ ತಯಾರಿ ಬೇಡ, ಅವಶ್ಯಕತೆ ಇಲ್ಲ ಎಂದು ಸವಾಲೆಸೆದರು.

Share this Story:

Follow Webdunia kannada

ಮುಂದಿನ ಸುದ್ದಿ

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕರ ವಿಚಾರ: ಸ್ಪಷ್ಟನೆ ಕೊಟ್ಟ ಸಿದ್ದರಾಮಯ್ಯ