Webdunia - Bharat's app for daily news and videos

Install App

ಹರಿಹರ ತಾಲೂಕಿನ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ , ಖರ್ಗೆ ರಾಜಕೀಯ ಭವಿಷ್ಯ

Webdunia
ಶನಿವಾರ, 1 ಅಕ್ಟೋಬರ್ 2022 (15:45 IST)
ಕಾಂಗ್ರೆಸ್​ನ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆ ಸಮೀಪಿಸುತ್ತಿದ್ದು, ಸಂಸದ ಶಶಿ ತರೂರ್ ಮತ್ತು ಮಾಜಿ ಸಚಿವ ಕೆ.ಎನ್​.ತ್ರಿಪಾಠಿ, ಗಾಂಧಿ ಪರಿವಾರದ ನಿಷ್ಠ ಮತ್ತು ಪಕ್ಷದ ಶಿಸ್ತಿನ ಸಿಪಾಯಿ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಿದ್ದಾರೆ.
ಮೂವರು ನಾಯಕರು ನಾಮಪತ್ರ ಸಲ್ಲಿಸಿದ್ದು, ಮುಂದಿನ ಕಾಂಗ್ರೆಸ್​ ಅಧ್ಯಕ್ಷ ಯಾರಾಗಲಿದ್ದಾರೆ ಎಂಬ ಕುತೂಹಲ ಗರಿಗೆದರಿರುವಾಗಲೇ ಖರ್ಗೆ ಕುರಿತಾದ ಅಚ್ಚರಿಯ ಭವಿಷ್ಯವೊಂದು ಹೊರಬಿದ್ದಿದೆ.
 
ಇತ್ತೀಚಿನ ದಿನಗಳಲ್ಲಿ ರಾಜಕೀಯ ಭವಿಷ್ಯದ ಕುರಿತು ಭಾರೀ ಸುದ್ದಿಯಲ್ಲಿರುವ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಇದೀಗ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರ ಕುರಿತು ಭವಿಷ್ಯ ನುಡಿದಿದ್ದಾರೆ. ಖರ್ಗೆ ಅವರು ಕಾಂಗ್ರೆಸ್​ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುತ್ತಾರೆ ಎಂದು ಫೇಸ್​ಬುಕ್​ ಪೇಜ್​ನಲ್ಲಿ ಭವಿಷ್ಯವಾಣಿಯನ್ನು ಸ್ವಾಮೀಜಿ ಪೋಸ್ಟ್​ ಮಾಡಿದ್ದಾರೆ.
ಖರ್ಗೆ ಅವರಿಗೆ ಸದ್ಯದ ದಶಾಭುಕ್ತಿಯಲ್ಲಿ ಅತ್ಯಂತ ಅನುಕೂಲಕರ ಸ್ಥಿತಿಗತಿಗಳು ನಡೆಯುತ್ತಿರುವುದರಿಂದ ಖರ್ಗೆ ಅವರಿಗೆ ಅಧಿಕಾರಿ ಪ್ರಾಪ್ತಿಯಾಗಲಿದೆ. ಆದ್ದರಿಂದ ಅವರಿಗೆ ಆಶೀರ್ವಾದ ಮಾಡುತ್ತಾ ದೀನ-ದಲಿತರಿಗೆ, ಬಡವರಿಗೆ, ನಿರುದ್ಯೋಗಿಗಳನ್ನು ಗುರುತಿಸಿ ಅವರಿಗೆ ಸಹಾಯವನ್ನು ಮಾಡಿ. ಮೇಲಾಗಿ ನಮ್ಮ ದೇಶ ನಿಂತಿರುವುದು ಕೃಷಿಯ ಮೇಲೆ ಆದ್ದರಿಂದ ರೈತರನ್ನು ಗಮನಿಸಿ, ಆದಷ್ಟು ರೈತರಿಗೆ ಆರ್ಥಿಕತೆಯ ಸಹಾಯ ಮಾಡಿ. ರೈತರ ಕುಟುಂಬದ ಶಿಕ್ಷಿತರಿಗೆ ನೆರವಾಗಿ, ಇದರಿಂದ ನಿಮಗೆ ಶ್ರೀ ಭಗವತಿ ಚಂಡಿಕಾ ಪರಮೇಶ್ವರಿಯು ಅನುಗ್ರಹ ಮಾಡುತ್ತಾಳೆ. ಇದು ನಿಮಗೆ ನೆನಪಿರಲಿ. ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶುಭ ಆಶೀರ್ವಾದಗಳನ್ನು ನೀಡುತ್ತಾ, ಎಲ್ಲರೂ ಒಳ್ಳೆಯದನ್ನೇ ಯೋಚಿಸಿ, ಒಳ್ಳೆಯದನ್ನೇ ಮಾಡಿ, ನಿಮಗೂ ಒಳ್ಳೆಯದೇ ಆಗುತ್ತದೆ. ಎನಗಿಂತ ಕಿರಿಯರಿಲ್ಲ, ಸದ್​ ಭಕ್ತರಿಗಿಂತ ಹಿರಿಯರಿಲ್ಲ ಎಂದು ಭವಿಷ್ಯವಾಣಿಯನ್ನು ಸ್ವಾಮೀಜಿ ನುಡಿದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments