Webdunia - Bharat's app for daily news and videos

Install App

ಹಣೆಗೆ ಹಚ್ಚಿದ್ದ ಕುಂಕುಮ ಅಳಿಸಿದ್ದಕ್ಕೆ ಟ್ರೋಲ್ ಆದ ಶಿವರಾಜ್ ಕುಮಾರ್

Krishnaveni K
ಶನಿವಾರ, 20 ಏಪ್ರಿಲ್ 2024 (10:05 IST)
ಶಿವಮೊಗ್ಗ: ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಪತ್ನಿ ಗೀತಾ ಪರವಾಗಿ ಪ್ರಚಾರ ಮಾಡುವುದರಲ್ಲಿ ನಟ ಶಿವರಾಜ್ ಕುಮಾರ್ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರ ವಿಡಿಯೋ ಒಂದು ಈಗ ವೈರಲ್ ಆಗಿದೆ.

ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸುತ್ತಿದ್ದಾರೆ. ಸಮಾವೇಶವೊಂದರಲ್ಲಿ ಗೀತಾ ಶಿವರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ವೇದಿಕೆಯಲ್ಲಿ ಜೊತೆಯಾಗಿ ಬಂದು ಕೂರುತ್ತಾರೆ. ಆದರೆ ವೇದಿಕೆ ಬರುವಾಗ ಶಿವಣ್ಣನ ಹಣೆ ಮೇಲೆ ಕುಂಕುಮವಿರುತ್ತದೆ.

ವೇದಿಕೆಯಲ್ಲೇ ಈ ಕುಂಕುಮವನ್ನು ಶಿವರಾಜ್ ಕುಮಾರ್ ಅಳಿಸಿ ಹಾಕುತ್ತಾರೆ. ಇದನ್ನು ನೋಡಿದ ಕೆಲವರು ಶಿವಣ್ಣನ ವರ್ತನೆಯನ್ನು ಟೀಕಿಸಿದ್ದಾರೆ. ಕುಂಕುಮ ನಮ್ಮ ಸಂಪ್ರದಾಯ. ಪಕ್ಷದ ಪ್ರಚಾರ ಮಾಡುವಾಗ ಕುಂಕುಮ ಅಳಿಸುವ ಅಗತ್ಯವೇನಿದೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

ಶಿವರಾಜ್ ಕುಮಾರ್ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಲು ಹೊರಟಾಗಲೇ ಕೆಲವರು ಅಪಸ್ವರವೆತ್ತಿದ್ದರು. ದೊಡ್ಮನೆಯವರು ಮೊದಲಿನಿಂದಲೂ ರಾಜಕೀಯದಿಂದ ದೂರವೇ ಇದ್ದಾರೆ. ರಾಜಕೀಯ ಮೀರಿ ಜನರು ಅವರನ್ನು ಗೌರವಿಸುತ್ತಾರೆ. ಹೀಗಿರುವಾಗ ಶಿವಣ್ಣನಿಗೆ ರಾಜಕೀಯ ಬೇಡ ಎಂದು ಕೆಲವರು ಅಭಿಪ್ರಾಯಪಟ್ಟಿದ್ದರು. ಆದರೆ ಈಗ ಕುಂಕುಮ ಅಳಿಸುವ ವಿಡಿಯೋ ನೋಡಿ ಮತ್ತಷ್ಟು ಜನ ಟೀಕೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಮ್ಮ-ಅಪ್ಪನನ್ನು ಒಂಟಿಯಾಗಿ ಬಿಡಬೇಡ, ಸಾವಿಗೂ ಮುನ್ನಾ ಸಹೋದರಿಗೆ ಸಂದೇಶ ಕಳುಹಿಸಿದ ಸಹೋದರ

ಬಿ ನಾಗೇಂದ್ರ ರಾಜೀನಾಮೆ: ಸಮಗ್ರ ದಲಿತ ಸಮುದಾಯಕ್ಕೆ ಸಿಕ್ಕ ಗೆಲುವು: ಆರ್‌ ಅಶೋಕ್‌

ಕಾಸರಗೋಡಿನಲ್ಲಿ ಓಣಂ ಆಚರಣೆಯ ವೇಳೆ ಬಾವಿಗೆ ಬಿದ್ದು ವಿದ್ಯಾರ್ಥಿ ಸಾವು

ನೀವು ಕೆಲಸ ಮಾಡೋದು MLAಗಾಗಿನಾ, ಜನರಿಗಾಗಿನಾ: ಅಧಿಕಾರಿಗೆ ಹೆಚ್‌ಡಿ ಕುಮಾರಸ್ವಾಮಿ ತರಾಟೆ, Video

ಪ್ರವಾಹಕ್ಕೆ ನಲುಗಿದ ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರಿಗೆ ಧೈರ್ಯ ತುಂಬಿದ ಡಿಕೆ ಶಿವಕುಮಾರ್‌

ಮುಂದಿನ ಸುದ್ದಿ
Show comments