Publish Date: Mon, 09 Dec 2019 (17:35 IST)
Updated Date: Mon, 09 Dec 2019 (17:37 IST)
ಕಾಂಗ್ರೆಸ್ - ಜೆಡಿಎಸ್ ಅಪಪ್ರಚಾರ ಮಾಡಿದ್ದಕ್ಕೆ ಜನತೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಬಿಜೆಪಿಗೆ ನೈತಿಕತೆಯ ವಿಜಯ ಸಿಕ್ಕಿದೆ.
ಹೀಗಂತ ಸಚಿವ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಬಿಜೆಪಿ ವಿಜಯೋತ್ಸವ ಆಚರಣೆ ವೇಳೆ ಮಾತನಾಡಿದ ಶೆಟ್ಟರ್, ಯಡಿಯೂರಪ್ಪ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಜನಾದೇಶ ಸಿಕ್ಕಿದೆ.
ಕಾಂಗ್ರೆಸ್ - ಜೆಡಿಎಸ್ ಪಕ್ಷದವರು ಅಪಪ್ರಚಾರ ಮಾಡಿದ್ದರು. ಅವರ ಅಪಪ್ರಚಾರವೇ ಭಾರತೀಯ ಜನತಾ ಪಕ್ಷಕ್ಕೆ ಧನಾತ್ಮಕ ಪರಿಣಾಮ ಬೀರಿದ್ದು, ಜನರು ಎಲ್ಲವನ್ನೂ ಪರಿಶೀಲಿಸಿ ಸ್ಥಿರ ಸರ್ಕಾರಕ್ಕೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಬಿಜೆಪಿಯನ್ನು ಆಯ್ಕೆ ಮಾಡಿದ್ದಾರೆ ಎಂದಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರು, ಎಲ್ಲ ಕ್ಷೇತ್ರಗಳಲ್ಲಿ ಎರಡೆರಡು ಬಾರಿ ಪ್ರಚಾರ ಮಾಡಿದ್ದಾರೆ. ಯಡಿಯೂರಪ್ಪ ಅವರ ಶ್ರಮಕ್ಕೆ ಬಂದಿರುವ ಪ್ರತಿಫಲವೇ ಹನ್ನೆರಡು ಕ್ಷೇತ್ರದ ಗೆಲುವಿಗೆ ಕಾರಣ ಅಂತ ಶೆಟ್ಟರ್ ಹೇಳಿದ್ರು.