Select Your Language

Notifications

webdunia
webdunia
webdunia
webdunia

ಅನುಪಮಾ ಶೆಣೈ ಡಿವೈಎಸ್‌ಪಿಯಲ್ಲ, ಮಾಜಿ ಡಿವೈಎಸ್‌ಪಿ: ಸಚಿವ ಪರಮೇಶ್ವರ್ ನಾಯ್ಕ ವ್ಯಂಗ್ಯ

ಅನುಪಮಾ ಶೆಣೈ ಡಿವೈಎಸ್‌ಪಿಯಲ್ಲ, ಮಾಜಿ ಡಿವೈಎಸ್‌ಪಿ: ಸಚಿವ ಪರಮೇಶ್ವರ್ ನಾಯ್ಕ ವ್ಯಂಗ್ಯ
ಬೆಂಗಳೂರು , ಶುಕ್ರವಾರ, 10 ಜೂನ್ 2016 (12:39 IST)
ಅನುಪಮಾ ಶೆಣೈ ಅವರು ಮಾಜಿ ಡಿವೈಎಸ್‌ಪಿ ಅದು ಮುಗಿದ ಅಧ್ಯಾಯ ಎಂದು ಬಳ್ಳಾರಿ ಉಸ್ತುವಾರಿ ಸಚಿವ ಪರಮೇಶ್ವರ್ ನಾಯ್ಕ ವ್ಯಂಗ್ಯವಾಡಿದ್ದಾರೆ.
 
ಅನುಪಮಾ ಶೆಣೈ ರಾಜೀನಾಮೆ ಕುರಿತು ಮಾಧ್ಯಮ ಮಿತ್ರರು ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವ ಪರಮೇಶ್ವರ್ ನಾಯ್ಕ, ನನ್ನ ಜಿಲ್ಲೆಯಲ್ಲಿ 7 ರಿಂದ 8 ಡಿವೈಎಸ್‌ಪಿಗಳಿದ್ದಾರೆ. ನೀವು ಯಾರ ಕುರಿತು ಕೇಳುತ್ತಿದ್ದೀರಾ ಎಂದು ವ್ಯಂಗ್ಯವಾಡಿದರು. ಅನುಪಮಾ ಶೆಣೈ ಅವರು ಮಾಜಿ ಡಿವೈಎಸ್‌ಪಿ ಅವರದು ಮುಗಿದ ಅಧ್ಯಾಯ. ಈ ಕುರಿತು ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.
 
ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ಅವರ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಸಚಿವರು, ಅವರ ರಾಜೀನಾಮೆ ಅಂಗೀಕರಿಸುವಂತೆ ನಾನು ಒತ್ತಡ ಹೇರುವ ಅವಶ್ಯಕತೆ ಇಲ್ಲವೆಂದು ಸ್ವಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತಿರುಪತಿ ತಿಮ್ಮಪ್ಪನ ದೇವಾಲಯದಲ್ಲಿ ಅಗ್ನಿ ಅಕಸ್ಮಿಕ