Publish Date: Sat, 07 Oct 2023 (13:00 IST)
Updated Date: Sat, 07 Oct 2023 (13:25 IST)
ನನಗೆ ಯಾವ ಹೈ ಕಮಾಂಡ್ ನಿಂದಲೂ ನೋಟಿಸ್ ಬಂದಿಲ್ಲ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.ಯಾವ ಹೈಕಮಾಂಡ್ ಇಲ್ಲ.ಲಿಂಗಾಯತ ಮಹಾ ಅಧಿವೇಶನ ಲಿಂಗಾಯತ ಶಕ್ತಿ ಪ್ರದರ್ಶನವಲ್ಲ .10 ಲಕ್ಷಕ್ಕೂ ಹೆಚ್ಚು ಜನ ಸೇರಿದ್ರೆ ಅದು ಶಕ್ತಿ ಪ್ರದರ್ಶನವಾಗುತ್ತೆ.ಸಿ ಎಂ ಜೊತೆ ನಿಮ್ಮ ಸಭೆ ಇದಿಯಾ ಎಂದಿದ್ದಕ್ಕೆ ಸಿ ಎಂ ನ ಕೇಳಿ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.ಸಿ ಎಂ ಜೊತೆ ನಾನು ಮಾತನಾಡಿರುವುದನ್ನು ಹೇಳುವುದಕ್ಕೆ ಆಗುವುದಿಲ್ಲ.ಸಮುದಾಯದ ಅಧಿಕಾರಗಳ ಲೀಸ್ಟ್ ಬಿಡುಗಡೆ ಬಗ್ಗೆ ಹುಚ್ಚುಚ್ಚು ಪ್ರಶ್ನೆ ಕೇಳಬೇಡಿ ಎಂದು ಶಾಮನೂರು ಹೇಳಿದ್ದು,ಜಾತಿ ಸಮೀಕ್ಷೆ ಬಗ್ಗೆ ಕೇಳಿದ್ದಕ್ಕೆ ಯಾವ ಜಾತಿ ಸಮೀಕ್ಷೆ ಇಲ್ಲ.ಡಿಸಂಬರ್ 23 ಮತ್ತು 24 ರಂದು ಲಿಂಗಾಯತ ಮಹಾ ಅಧಿವೇಶನ ನಡೆಯುತ್ತೇ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.