Publish Date: Wed, 05 Jul 2017 (15:36 IST)
Updated Date: Wed, 05 Jul 2017 (15:38 IST)
ನಡುರಸ್ತೆಯಲ್ಲಿಯೇ ಕಾಮುಕನೊಬ್ಬ ಯುವತಿಯ ಸೊಂಟ ಮುಟ್ಟಿ ಕಿರುಕುಳ ನೀಡಿ ಅಸಭ್ಯ ವರ್ತನೆ ತೋರಿದ ಘಟನೆ ವರದಿಯಾಗಿದೆ.
ಯುವತಿ ಜಾಲಹಳ್ಳಿ ಕ್ರಾಸ್ ಬಳಿ ರಸ್ತೆಯನ್ನು ದಾಟುತ್ತಿದ್ದಾಗ ನಾರಾಯಣ್ ಸ್ವಾಮಿ ಎನ್ನುವ ಆರೋಪಿ ಆಕೆಯ ಸೊಂಟ ಮುಟ್ಟಿ ಕಿವಿಚಿದ್ದಲ್ಲದೇ ಕೆಲ ಅಶ್ಲೀಲ ಪದಗಳನ್ನು ಬಳಸಿ ಕೀಳು ವರ್ತನೆ ತೋರಿದ್ದಾನೆ ಎನ್ನಲಾಗಿದೆ.
ಆರೋಪಿಯ ದುರ್ನಡತೆಯಿಂದ ಕೋಪಗೊಂಡ ಯುವತಿ ಆತನ ಕೆನ್ನೆಗೆ ಬಾರಿಸಿದ್ದಾಳೆ. ನಂತರ ಪೊಲೀಸ್ ಠಾಣೆಗೆ ತೆರಳಿ ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾಳೆ.
ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ನಾರಾಯಣ್ ಸ್ವಾಮಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.