Select Your Language

Notifications

webdunia
webdunia
webdunia
webdunia

ಶಿಕ್ಷಕಿ ಮೇಲೆ ಲೈಂಗಿಕ ಕಿರುಕುಳ: ಕೆಪಿಸಿಸಿ ಕಾರ್ಯದರ್ಶಿ ಸ್ಥಾನದಿಂದ ಗುರಪ್ಪನಾಯ್ಡು 6 ವರ್ಷ ಉಚ್ಚಾಟನೆ

Teacher Sexual Harrasment Case, KPCC Secretary Gurappa Naidu, KPCC Disciplinary Committee Chairman Rehman Khan,

Sampriya

ಬೆಂಗಳೂರು , ಶನಿವಾರ, 30 ನವೆಂಬರ್ 2024 (16:57 IST)
Photo Courtesy X
ಬೆಂಗಳೂರು: ಶಿಕ್ಷಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಸ್ಥಾನದಿಂದ ಗುರಪ್ಪನಾಯ್ಡು ಅವರನ್ನು 6 ವರ್ಷಗಳ ಕಾಲ ಉಚ್ಛಾಟನೆ ಮಾಡಿ ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಆದೇಶ ಹೊರಡಿಸಿದ್ದಾರೆ.

ಶಿಕ್ಷಕಿಯೊಬ್ಬರು ಗುರಪ್ಪನಾಯ್ಡು ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಅವರ ದೂರಿನಂತೆ 2021ರ ಮಾರ್ಚ್ 1ರಿಂದ 2023ರ ಆಗಸ್ಟ್ 15ರವರೆಗೆ ನಾಯ್ಡು ತನ್ನ ಮೇಲೆ ಲೈಂಗಿಕ ಕಿರುಕುಳ ನೀಡಿರುವುದಾಗಿ ದೂರಿದ್ದರು.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುರಪ್ಪನಾಯ್ಡು ವಿರುದ್ಧ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್‌ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದರು, ಇದೀಗ ಮಹಿಳೆ ನೀಡಿದ ದೂರಿನ ಆದಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗುರಪ್ಪನಾಯ್ಡು ವಿರುದ್ಧ ದೂರು ದಾಖಲಾಗುತ್ತಿದ್ದ ಹಾಗೇ ಕೆಪಿಸಿಸಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಸವಣ್ಣನವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು ಯಾಕೆ: ಬಸನಗೌಡ ಪಾಟೀಲ್ ಯತ್ನಾಳ್ ಸಮರ್ಥನೆ