Webdunia - Bharat's app for daily news and videos

Install App

ಬಾಲಕನಿಗೆ ಲೈಂಗಿಕ ಕಿರುಕುಳ : ಶಿಕ್ಷಕನಿಗೆ 11 ವರ್ಷ ಜೈಲು

Webdunia
ಸೋಮವಾರ, 2 ಆಗಸ್ಟ್ 2021 (15:05 IST)
ತುಮಕೂರು (ಆ.02): ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದ ಮದರಸಾ ಶಿಕ್ಷಕನಿಗೆ 11 ವರ್ಷ ಜೈಲು ಶಿಕ್ಷೆ ಹಾಗೂ 30 ಸಾವಿರ ದಂಡ ವಿದಿಸಿ ತುಮಕೂರಿನ ಫೋಕ್ಸೋ ವಿಶೇ ನ್ಯಾಯಾಲಯ ಆದೇಶ ಹೊರಡಿಸಿದೆ. ತುಮಕೂರು ಗ್ರಾಮಾಂತರೆದ ಅಮಲಾಪುರ ಮದರಸದಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಉತ್ತರ ಪ್ರದೇಶದ ನಿವಾಸಿ ಮುಷರಫ್ ಏಪ್ರಿಲ್ 17 2015ರಲ್ಲಿ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಅರೋಪ ಎದುರಿಸುತ್ತಿದ್ದ.

•ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದ ಮದರಸಾ ಶಿಕ್ಷಕ
•ಮದರಸಾ ಶಿಕ್ಷಕನಿಗೆ 11 ವರ್ಷ ಜೈಲು ಶಿಕ್ಷೆ
•2015ರಲ್ಲಿ ತುಮಕೂರಿನಲ್ಲಿ ನಡೆದ ಪ್ರಕರಣ
ಇದೀಗ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ  ಶಿಕ್ಷ ಹಾಗೂ ದಂಡ ವಿಧಿಸಲಾಗಿದೆ. ಬಾಲಕನಿಗೆ 5 ಲಕ್ಷ ರು.ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ರೈಲ್ವೆ ಟಿಕೆಟ್ ಬುಕಿಂಗ್ ಮಾಡುವ ನೆಪದಲ್ಲಿ  ಬಾಲಕನನ್ನು  ರೈಲ್ವೆ ನಿಲ್ದಾನದ ಬಳಿ ಇರುವ  ಲಾಡ್ಜ್ಗೆ ಕರೆಸಿಕೊಂಡಿದ್ದ ಮುಫ್ತಿ  ಲೈಂಗಿಕ ದೌರ್ಜನ್ಯ ಎಸಗಿ ವಾಪಸ್ ಮದರಸಾಗೆ ಬಿಟ್ಟು ಬಂದಿದ್ದ.
ಬಾಲಕನನ್ನು ನೊಡಲು ಬಂದಿದ್ದ ತಾಯಿ ಮೂಲಕ ಈ ಪ್ರಕರಣ ಬೆಳಕಿಗೆ ಬಂದಿತ್ತು. ಮದರಸದ ಶಿಕ್ಷಕನ ವಿರುದ್ಧ ತುಮಕುರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 377. 506 ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು.
ಎಫ್ಐಆರ್ ದಾಖಲಾದ ಬಳಿಕ ತಲೆ ಮರೆಸಿಕೊಂಡಿದ್ದ ಅರೋಪಿ ಮುಫ್ತಿ  ಹೈಕೋರ್ಟ್ನಲ್ಲಿ ಜಾಮೀನು ಪಡೆದಿದ್ದ. ವಿಚಾರನೆ ನಡೆದು 11 ಜನರು ಈತನ ವಿರುದ್ಧ ಸಾಕ್ಷ್ಯ ಹೇಳಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂವಿಧಾನದ ಬಗ್ಗೆ ಆರ್ ಎಸ್ಎಸ್ ನ ದತ್ತಾತ್ರೇಯ ಹೊಸಬಾಳೆ ಮಾತು ಒಪ್ಪಲ್ಲ: ಎಚ್ಎಂ ರೇವಣ್ಣ

ರಮೇಶ್ ಜಾರಕಿಹೊಳಿ ಸಿಡಿ ಮಾಡಿದವರು ಯಾರೆಂದು ಹೇಳಿದ ಬಸನಗೌಡ ಪಾಟೀಲ್ ಯತ್ನಾಳ್

ಹಿಂದುಳಿದ ವರ್ಗಗಳ ಕಡೆಗಣನೆಯಿಂದ ಅಧಿಕಾರ ಕಳಕೊಂಡ ಕಾಂಗ್ರೆಸ್: ಭೂಪೇಂದ್ರ ಯಾದವ್

ಸುಹಾಸ್ ಶೆಟ್ಟಿ ಕೇಸ್: ಹಿಂದೂ ಸಂಘಟನೆಗಳ ಅನುಮಾನ ನಿಜವಾಯ್ತು

ಜೆಲ್ಲಿ ಚಾಕಲೇಟ್ ಸೇವಿಸುವ ಮುನ್ನ ಹುಷಾರ್

ಮುಂದಿನ ಸುದ್ದಿ