ದ್ವಿತೀಯ ಪಿಯುಸಿ ಪರೀಕ್ಷೆ ದಿನಾಂಕ ಬದಲಾವಣೆ: ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ

Webdunia
ಗುರುವಾರ, 3 ಮಾರ್ಚ್ 2022 (18:16 IST)
ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ಮತ್ತೊಂದು ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ದ್ವಿತೀಯ ಪಿಯುಸಿ ಹಾಗೂ ಜೆಇಇ ಪರೀಕ್ಷೆಯು ಒಟ್ಟಿಗೆ ಬಂದ ಕಾರಣ ದ್ವಿತೀಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದ್ದು, ಏಪ್ರಿಲ್ 22ರಿಂದ ಮೇ 5ರವರೆಗೆ ಪರೀಕ್ಷೆಗಳು ನಡೆಯಲಿವೆ.
ಈ ಪರಿಷ್ಕೃತ ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಮಾರ್ಚ್ 5ರೊಳಗೆ ಅವಕಾಶ ಇದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಈ ಮೊದಲು ಏಪ್ರಿಲ್ 16 ಇಂದ ಮೇ 06 ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಿಗಧಿ ಮಾಡಲಾಗಿತ್ತು. ಆದ್ರೆ, ಜೆಇಇ ಪರೀಕ್ಷೆಯು ಒಟ್ಟಿಗೆ ಬಂದ ಕಾರಣ ಈ ಬದಲಾವಣೆ ಮಾಡಲಾಗಿದೆ.
ಪರಿಷ್ಕೃತಗೊಂಡ ತಾತ್ಕಾಲಿಕ ವೇಳಾಪಟ್ಟಿ ಹೀಗಿದೆ.
ಏ. 22 - ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ.
ಏ. 23 - ಹಿಂದಿ.
ಏ. 25 - ಅರ್ಥಶಾಸ್ತ್ರ.
ಏ. 26 - ಹಿಂದೂಸ್ಥಾನಿ ಸಂಗೀತ, ಮನಃಶಾಸ್ತ್ರ, ರಾಸಾಯನ ಶಾಸ್ತ್ರ.
ಏ. 27 - ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್.
ಏ. 28 - ಕನ್ನಡ, ಅರೇಬಿಕ್.
ಏ. 30 - ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ.
ಮೇ 2 - ಭೂಗೋಳಶಾಸ್ತ್ರ, ಜೀವಶಾಸ್ತ್ರ.
ಮೇ 4 - ಇಂಗ್ಲಿಷ್.
ಮೇ 5 - ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್.
ಮೇ 6 - ಗಣಿತಶಾಸ್ತ್ರ, ಶಿಕ್ಷಣ ಶಾಸ್ತ್ರ, ಮೂಲಗಣಿತ.
ಮೇ 7 - ಐಚ್ಚಿಕ ಕನ್ನಡ, ಲೆಕ್ಕ ಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ.
ಮೇ 9 - ಇತಿಹಾಸ, ಭೌತಶಾಸ್ತ್ರ.
ಮೇ 11 - ರಾಜ್ಯಶಾಸ್ತ್ರ ಸಂಖ್ಯಾಶಾಸ್ತ್ರ.
ರಾಜ್ಯದ ದ್ವಿತೀಯ ಪಿಯು ಪರೀಕ್ಷೆ ಮತ್ತು ಎನ್‌ಟಿ‌ಎ ನಡೆಸುವ ಜೆಇಇ ಪರೀಕ್ಷೆಯ ಕೆಲ ಪತ್ರಿಕೆಗಳು ಒಂದೇ ದಿನಾಂಕದಂದು ಬಂದಿರುವ ಕಾರಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆ ವೇಳಾಪಟ್ಟಿ (ತಾತ್ಕಾಲಿಕ) ಪರಿಷ್ಕರಿಸಲಾಗಿದೆ.
ಈ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಮಾ.5ರ ಸಂಜೆ 5ರವರೆಗೆ ಕಾಲಾವಕಾಶ ನೀಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿರುಪತಿ ಲಡ್ಡು ಪ್ರಕರಣ: 15 ತಿಂಗಳ ತನಿಖೆ ಬಳಿಕ ಕೊನೆಗೂ ಜಾರ್ಜ್‌ಶೀಟ್ ಸಲ್ಲಿಕೆ, ಇವರೇ ಪ್ರಮುಖ ಆರೋಪಿಗಳು

ಎಂಬಿಬಿಎಸ್ ಸೀಟಿಗಾಗಿ ತನ್ನ ಕಾಲನ್ನು ತಾನೇ ಕಟ್ ಮಾಡಿಕೊಂಡ ವ್ಯಕ್ತಿ

ದುನಿಯಾ ವಿಜಯ್ ಲ್ಯಾಂಡ್‌ ಲಾರ್ಡ್ ಸಿನಿಮಾ ನೋಡುತ್ತೇನೆಂದ ಸಿಎಂ ಸಿದ್ದರಾಮಯ್ಯ

ನಾನು ಕಾಂಗ್ರೆಸ್ ಪಕ್ಷದ ರೇಖೆಯನ್ನು ಉಲ್ಲಂಘಿಸಿಲ್ಲ: ಶಶಿ ತರೂರ್‌ ಸ್ಪಷ್ಟನೆ

ನಂದಿನಿ ಹಾಲು, ಮೊಸರು ಇದೀಗ ₹10ಕ್ಕೂ ಲಭ್ಯ, ಇಲ್ಲಿದೆ ಮಾಹಿತಿ

ಮುಂದಿನ ಸುದ್ದಿ
Show comments