ರಾಜ್ಯ ಪದವಿ ಪೂರ್ಣ ಶಿಕ್ಷಣ ಇಲಾಖೆ ನಡೆಸಿರುವ ಪ್ರಸಕ್ತ 2022ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ (2nd puc result) ಪ್ರಕಟಗೊಂಡಿದೆ.ದಕ್ಷಿಣ ಕನ್ನಡ ಮತ್ತೊಮ್ಮೆ ಪ್ರಥಮ ಸ್ಥಾನ ಪಡೆದಿದೆ.
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್ ಬೆಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದ್ದು,ಈ ಬಾರಿ ಶೇ.88.02 ವಿದ್ಯಾರ್ಥಿಗಳು ಉತ್ತೀರ್ಣರಾಗಿರುವ ದಕ್ಷಿಣ ಪ್ರಥಮ ಸ್ಥಾನ ಗಳಿಸಿದೆ. ಶೇ.86.38 ಫಲಿತಾಂಶ ಪಡೆದ ಉಡುಪಿ 2ನೇ ಸ್ಥಾನ ಹಾಗೂ 77.14 ಫಲಿತಾಂಶ ಪಡೆದ ವಿಜಯಪುರ ಮೂರನೇ ಸ್ಥಾನ ಗಳಿಸಿದೆ. ಶೇ. 49.31 ವಿದ್ಯಾರ್ಥಿಗಳು ಪಾಸಾಗಿರುವ ಚಿತ್ರದುರ್ಗ ಕೊನೆಯ ಸ್ಥಾನಕ್ಕೆಕುಸಿದಿದೆ.
ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಉಡುಪಿ ದ್ವಿತೀಯ,ವಿಜಯಪುರ 3ನೇ ಸ್ಥಾನ, ಬೆಂಗಳೂರು ದಕ್ಷಿಣ ನಾಲ್ಕನೇ ಸ್ಥಾನ, ಉತ್ತರ ಕನ್ನಡ 5ನೇ ಸ್ಥಾನ ಹಾಗೂ ಚಿತ್ರದುರ್ಗ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ವಿಜ್ಞಾನ ವಿಭಾಗದಲ್ಲಿ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.