ಮೇಲ್ಛಾವಣಿ ಕುಸಿತ: ಬಯಲಲ್ಲಿ ಸಾಗಿದೆ ಪಾಠ

Webdunia
ಮಂಗಳವಾರ, 17 ಜುಲೈ 2018 (14:44 IST)
ನಿರಂತರ ಮಳೆಯಿಂದಾಗಿ ಶಾಲೆಯ ಮೇಲ್ಚಾವಣಿಯಲ್ಲಿ ಕುಸಿತಗೊಂಡಿದೆ. ಹೀಗಾಗಿ ಮಳೆ, ಚಳಿ ಎನ್ನದೇ ಮಕ್ಕಳು ಬಯಲಿನಲ್ಲಿಯೇ ಕುಳಿತು ಪಾಠ ಕಲಿಯುವಂತಾಗಿದೆ.

  
ಮೈದಾನದಲ್ಲಿ ಕುಳಿತು ಮಕ್ಕಳು ಪಾಠ ಕಲಿಯುವ ಪರಿಸ್ಥಿತಿಯ ಚಿತ್ರಣ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮೆಳ್ಳಾಗಟ್ಟಿ ಪ್ಲಾಟ್ ಶಾಲೆಯಲ್ಲಿ ಕಂಡುಬರುತ್ತಿದೆ. ನೆಲಕ್ಕೆ ಉರಳಿದ ಹಂಚು, ರೀಪ್-ರಾಪ್ಟರ್ ಗಳು ಮಳೆಯ ರೌದ್ರಾವತಾರಕ್ಕೆ ಸಾಕ್ಷಿಯಾಗಿವೆ. ಗೋಡೆಯಿಂದ ಕಲ್ಲು, ಮಣ್ಣಿನ ಚೂರು ಬೀಳುವದನ್ನು ಗಮನಿಸಿದ ಮಕ್ಕಳು ತಕ್ಷಣ ಹೊರ ಓಡಿದರು. ಹೀಗಾಗಿ ಶಿಥಿಲಾವಸ್ಥೆಗೊಂಡ ಸುಮಾರು 25 ವರ್ಷಕ್ಕೂ ಹಳೆಯ ಕಟ್ಟಡದ ಛಾವಣಿ ಕುಸಿಯುವ ಮುನ್ನ ಅಪಾಯದಿಂದ ಪಾರಾದರು.

100 ಕ್ಕೂ ಅಧಿಕ ಮಕ್ಕಳು ಓದುತ್ತಿರುವ ಶಾಲೆಯಲ್ಲಿ ಈ ಅವಘಡ ಸಂಭವಿಸಿದೆ. ಕುಸಿದು ಗೆದ್ದಲು ತಿಂದಿರುವ ಶಾಲೆಯ ಕಾರಿಡಾರ್ ನಲ್ಲಿರುವ ಕಂಬಗಳು ನೆಲಕ್ಕೆ ಉರುಳಿವೆ. ಬಿಸಿಯೂಟ ತಯಾರಿಸುವ ಕೊಣೆಯಲ್ಲು ಗೋಡೆಯ ಕಲ್ಲು-ಮಣ್ಣು, ಹೆಂಚುಗಳು ನೆಲಕ್ಕೆ ಉರುಳಿವೆ. ಹೀಗಾಗಿ ಮಳೆ, ಚಳಿಯಲ್ಲಿ ಕುಳಿತು ಮಕ್ಕಳು ಪಾಠ ಕಲಿಯುವಂತಾಗಿದೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎಂಬಿಬಿಎಸ್ ಸೀಟಿಗಾಗಿ ತನ್ನ ಕಾಲನ್ನು ತಾನೇ ಕಟ್ ಮಾಡಿಕೊಂಡ ವ್ಯಕ್ತಿ

ದುನಿಯಾ ವಿಜಯ್ ಲ್ಯಾಂಡ್‌ ಲಾರ್ಡ್ ಸಿನಿಮಾ ನೋಡುತ್ತೇನೆಂದ ಸಿಎಂ ಸಿದ್ದರಾಮಯ್ಯ

ನಾನು ಕಾಂಗ್ರೆಸ್ ಪಕ್ಷದ ರೇಖೆಯನ್ನು ಉಲ್ಲಂಘಿಸಿಲ್ಲ: ಶಶಿ ತರೂರ್‌ ಸ್ಪಷ್ಟನೆ

ನಂದಿನಿ ಹಾಲು, ಮೊಸರು ಇದೀಗ ₹10ಕ್ಕೂ ಲಭ್ಯ, ಇಲ್ಲಿದೆ ಮಾಹಿತಿ

ರಾಜಸ್ಥಾನದಲ್ಲಿ ತೀವ್ರಗೊಂಡ ಶೀತಗಾಳಿ, ಮನೆಯಿಂದ ಹೊರಬರಲು ಜನತೆ ಹಿಂದೇಟು

ಮುಂದಿನ ಸುದ್ದಿ
Show comments