Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಸ್ಕೂಲ್‌ ಬಸ್‌ ಹರಿದು 16 ವರ್ಷ ಬಾಲಕಿ ಸಾವು

school bus child bengaluru ಬೆಂಗಳೂರು ಸ್ಕೂಲ್‌ ಬಸ್‌ ವಿದ್ಯಾರ್ಥಿನಿ
bengaluru , ಗುರುವಾರ, 26 ಮೇ 2022 (14:18 IST)
ಸ್ಕೂಲ್‌ ಬಸ್‌ ಹರಿದು 16 ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಿನ ಬನಶಂಕರಿ ದೇವೇಗೌಡ ಪಟ್ರೋಲ್‌ ಬಂಕ್‌ ಬಳಿ ಸಂಭವಿಸಿದೆ.
ಕೀರ್ತನಾ ಎಂಬ ಬಾಲಕಿ ಮೃತಪಟ್ಟಿದ್ದು, ವಿದ್ಯಾರ್ಥಿಗಳಾದ ಹರ್ಷಿತಾ ಮತ್ತು ದರ್ಶನ್‌ ಗಾಯಗೊಂಡಿದ್ದಾರೆ.
ಹರ್ಷಿತಾ, ಕೀರ್ತನ , ದರ್ಶನ್ ತ್ರಿಬಲ್ ರೈಡಿಂಗ್ ಬರುತ್ತಿದ್ದ ವೇಳೆ ಹಿಂದೆಯಿಂದ ಬಂದ ಡೆಲ್ಲಿ ಪಬ್ಲಿಕ್ ಸ್ಕೂಲ್ ಬಸ್ ಡಿಕ್ಕಿ ಹೊಡೆದಿದೆ.
ಸ್ಕೂಲ್ ಬಸ್‌ ಡಿಕ್ಕಿ ಹೊಡೆದ ರಭಸಕ್ಕೆ ಕೀರ್ತನಾ ಬೈಕ್‌ ನಿಂದ ಕೆಳಗೆ ಬಿದ್ದಿದ್ದು, ಆಕೆಯ ಮೇಲೆ ಬಸ್‌ ಹರಿದು ಸ್ಥಳದಲ್ಲೇ ಮೃತಪಟ್ಟಿದ್ಧಾಳೆ.
ಬನಶಂಕರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಸ್ಕೂಲ್ ಬಸ್‌ ಅನ್ನು ವಶಪಡಿಸಿಕೊಂಡಿದ್ದಾರೆ. ಪರಾರಿಯಾದ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಕ್ಯತೆಗೆ ಧಕ್ಕೆ ತರಲು ಮತಾಂಧ ಶಕ್ತಿಗಳ ಪ್ರಯತ್ನ: ದೇವೇಗೌಡ