ಶಬರಿಮಲೆ ಉಳಿಸಿ: ಪ್ರತಿಭಟನೆ

Webdunia
ಗುರುವಾರ, 11 ಅಕ್ಟೋಬರ್ 2018 (19:43 IST)
ಕೇರಳದ ಶಬರಿಮಲೈನಲ್ಲಿನ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕೆಂಬ ನ್ಯಾಯಾಲಯದ ತೀರ್ಪು ಪುನರ್ ಪರಿಶೀಲಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

ತುಮಕೂರಿನಲ್ಲಿ ಅಯ್ಯಪ್ಪ ಭಕ್ತರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಜಮಾಯಿಸಿದ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ನೇತೃತ್ವದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿದರು. 'ಸೇವ್ ಶಬರಿಮಲೆ' ಘೋಷಣೆಯಡಿ ನಡೆದ ಪ್ರತಿಭಟನೆಯಲ್ಲಿ ಮಹಿಳೆಯರು ಭಾಗವಹಿಸಿದ್ದುದು ಗಮನರ್ಹವಾಗಿತ್ತು.

ಅಯ್ಯಪ್ಪ ಸ್ವಾಮಿ ಭಜನೆ ಮಾಡುತ್ತ ರಸ್ತೆ ಮಧ್ಯೆ ಕುಳಿತು ಪ್ರತಿಭಟಿಸಿದರು. ಸಮೀಪದಲ್ಲೇ ಇದ್ದ ಅರಳಿ ಮರದ ಬಳಿ ಅಯ್ಯಪ್ಪ ಸ್ವಾಮಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ಅವಕಾಶ ನೀಡದಂತೆ ಸಂಪ್ರದಾಯವನ್ನು ಪಾಲನೆ ಮಾಡಿಕೊಂಡು ಬರಲಾಗಿದೆ.

ಏಕಾಏಕಿ ಅದರ ವಿರುದ್ಧ ಹೋಗಬಾರದು, ವೈಜ್ಞಾನಿಕವಾಗಿ ದೇಗುಲದಲ್ಲೂ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಇದನ್ನು ನ್ಯಾಯಾಲಯ ಪರಿಗಣಿಸಬೇಕು ಎಂದು ಒತ್ತಾಯಿಸಿದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ 45 ವರ್ಷದ ನಿತಿನ್ ನಬಿನ್ ದಾಖಲೆ

ಬಿಜೆಪಿಯಲ್ಲಿ ಮುಳುಗುತ್ತಿರುವವರಿಗೆ ನನ್ನ ಹೆಸರೇ ಆಸರೆ: ಪ್ರಿಯಾಂಕ್ ಖರ್ಗೆ ಟಾಂಗ್

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಬೆಳ್ಳಿ ಬೆಲೆ ದಾಖಲೆಯ ಏರಿಕೆ, ಚಿನ್ನಕ್ಕೆ ಇಷ್ಟಾಗಿದೆ

ಅಬಕಾರಿ ಇಲಾಖೆಯಲ್ಲಿ 2,500 ಕೋಟಿ ಹಗರಣ, ಮಂಥ್ಲಿ ಮನಿ ವಸೂಲಿ: ಆರ್ ಅಶೋಕ್ ಆರೋಪಗಳ ಸುರಿಮಳೆ

ಮುಂದಿನ ಸುದ್ದಿ
Show comments