Publish Date: Wed, 17 May 2023 (19:02 IST)
Updated Date: Wed, 17 May 2023 (18:00 IST)
ಕರ್ನಾಟಕ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರ ಹೆಸರು ಜೋರಾಗುತ್ತಿದ್ದಂತೆ, ಸಿದ್ದುಗೆ ಶಾಸಕ ಸತೀಶ್ ಜಾರಕಿಹೊಳಿ ಪರೋಕ್ಷ ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ಅವರಿಗೆ ಆಡಳಿತ ಅನುಭವ ಇದೆ. ಕಳೆದ ಬಾರಿಯಂತೆ ಈ ಬಾರಿಯೂ ಸರಾಗವಾಗಿ ಆಡಳಿತ ನಡೆಯಲಿದೆ. ಅವರ ಕಾರ್ಯಕ್ರಮ ಕಾರ್ಯವೈಖರಿಯೇ ಮತ್ತೆ ರಿಪೀಟ್ ಆಗಲಿದೆ ಎಂದರು. ಅಂತೆಯೇ ಜನರಿಗೂ ಪಕ್ಷಕ್ಕೆ ಅನುಕೂಲ ಆಗುವ ವಿಶ್ವಾಸವಿದೆ. ಸೀಕ್ರೆಟ್ ಬ್ಯಾಲೆಟ್ ಮಾನದಂಡದ ಮೇಲೆ ಸಿದ್ದರಾಮಯ್ಯ ಆಯ್ಕೆ ನಡೆದಿದೆ. ಡಿಕೆ ಶಿವಕುಮಾರ್ ಡಿಸಿಎಂ ಆಗಬಹುದೂ ಅಥವಾ ಇಲ್ಲದೇ ಇರಬಹುದು. ನಾವೆಲ್ಲ ಅಧಿಕಾರ ಇರಲಿ ಇಲ್ಲದೇ ಇರಲಿ ಪಕ್ಷಕ್ಕಾಗಿ ದುಡಿಯುತ್ತೇವೆ. ಅಂತೆಯೇ ಲೋಕಸಭೆ ಚುನಾವಣೆ ಕೂಡ ಮಾಡ್ತೇವೆ ಎಂದರು.