Select Your Language

Notifications

webdunia
webdunia
webdunia
webdunia

ನಾನು ಶೇ 100 ರಷ್ಟು ಸರಿ ಎನ್ನಲ್ಲ, ಆದರೆ… ಇಡಿ ದಾಳಿ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಶಾಕಿಂಗ್ ಹೇಳಿಕೆ

Satish Jarakiholi
ಬೆಂಗಳೂರು: ನಾನು ಶೇ. 100 ರಷ್ಟು ಸರಿ ಎಂದು ಹೇಳಲ್ಲ. ಆದರೆ ದೊಡ್ಡ ದೊಡ್ಡ ಮೀನುಗಳಿವೆ ಎಂದು ತಮ್ಮ ನಿವಾಸದ ವೇಳೆ ಇಡಿ ದಾಳಿ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಮೊನ್ನೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ನಿನ್ನೆಯೂ ದಾಳಿ ಮುಂದುವರಿದಿತ್ತು. ಇದರ ಬೆನ್ನಲ್ಲೇ ಸಿಎಂ ಡಿಕೆ ಶಿವಕುಮಾರ್ ಇದು ರಾಜಕೀಯ ಪ್ರೇರಿತ ದಾಳಿ ಎಂದು ಕಿಡಿ ಕಾರಿದ್ದರು. ಇದೀಗ ಸ್ವತಃ ಸತೀಶ್ ಜಾರಕಿಹೊಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

‘ದಲಿತ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನಮ್ಮ ಸಮಾಜದಲ್ಲಿ ನಾಗೇಂದ್ರ ಮೇಲೆ ದಾಳಿ ಮಾಡಿದ್ರು. ಇದೀಗ ನನ್ನ ಮೇಲೆ ದಾಳಿ ಮಾಡಲಾಗಿದೆ. ನಮ್ಮ ಸಮುದಾಯವೇ ಟಾರ್ಗೆಟ್ ಆ್ಗತಿದೆಯಾ ಎನ್ನುವ ಅನುಮಾನ ಸಹಜವಾಗಿ ಕಾಡುತ್ತದೆ.

ನಮ್ಮಲ್ಲಿ ದೊಡ್ಡ ದೊಡ್ಡ ಮೀನುಗಳಿವೆ. ಅದನ್ನು ಬಿಟ್ಟು ನಮ್ಮ ಕಡೆ ಬಂದಿದ್ದಾರೆ. ಇದು ನಮಗೂ ಅಚ್ಚರಿ ತಂದಿದೆ. ನಾನು 100% ಸರಿ ಎಂದು ಹೇಳಲ್ಲ. ಸಣ್ಣ ತಪ್ಪು ಮಾಡಿರಬಹುದು. 2 ಕೋಟಿ ರೂ. ಹಣ, ದಾಖಲೆ ತೆಗೆದುಕೊಂಡು ಹೋಗಿರುವುದು ನಿಜ. ಆದರೆ ನಾನು ಸಣ್ಣ ಮೀನಷ್ಟೇ. ಬಿಜೆಪಿ ನಾಯಕರು ತಪ್ಪೇ ಮಾಡಲ್ವಾ? ಅವರ ಮೇಲೆ ಯಾಕೆ ದಾಳಿಯಾಗಲ್ಲ?’ ಎಂದು ಸತೀಶ್ ಜಾರಕಿಹೊಳಿ ಪ್ರಶ್ನೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಡೆಯುವಾಗ ನೆಲ ನೋಡಿ ಎನ್ನೋದು ಇದಕ್ಕೇ… ನಿರ್ಮಾಣ ಹಂತದ ಮನೆಯಲ್ಲಿ ನಡೆಯಿತು ಭೀಕರ ದುರಂತ Video