Daily Horoscope

Select Your Language

Notifications

webdunia
webdunia
webdunia
webdunia

ಜೈಲಿನಿಂದ ಹೊರ ಹೋಗಿದ್ದರಾ ಶಶಿಕಲಾ..? ಸ್ಫೋಟಕ ಸುದ್ದಿ ಬಹಿರಂಗ

ಶಶಿಕಲಾ
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಜಯಲಲಿತಾ ಆಪ್ತೆ ಶಶಿಕಲಾಗೆ ಜೈಲಿನಲ್ಲಿ ರಾಜ ಮರ್ಯಾದೆ ನೀಡಲಾಗುತ್ತಿದೆಯಾ..? ಎಂಬ ಇಂಬು ನೀಡುವ ಮತ್ತೊಂದು ವಿಡಿಯೋ ಮಾಧ್ಯಮಗಳಲ್ಲಿ ಪ್ರತ್ಯಕ್ಷವಾಗಿದೆ.

ಈ ವಿಡಿಯೋದಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಮುಖ್ಯ ದ್ವಾರದಿಂದ ಶಶಿಕಲಾ ಒಳಗೆ ಬರುತ್ತಿರುವ ವಿಡಿಯೋ ಇದೆ. ಮೊದಲಿಗೆ ಹಿಂದಿನ ಅಧೀಕ್ಷಕಿ ಅನಿತಾ ಒಳಗೆ ಬರುತ್ತ಻ರೆ. ಅವರ ಹಿಂದೆಯೇ ಚುಟಿದಾರ್ ಹಾಕಿರುವ ಶಶಿಕಲಾ, ಅವರ ಅತ್ತಿಗೆ ಇಳವರಸಿ ಬರುವ ದೃಶ್ಯವಿದೆ. ಹಾಗಾದರೆ, ಜೈಲು ಶಿಕ್ಷೆಗೆ ಗುರಿಯಾಗಿರುವ ಶಶಿಕಲಾ ಜೈಲಿನಿಂದ ಹೊರ ಹೋಗಿದ್ದರ ಅನುಮಾನ ಮೂಡಲಾರಂಭಿಸಿದೆ.

ಪರಪ್ಪನ ಅಗ್ರಹಾರದಲ್ಲಿ ಶಶಿಕಲಾಗೆ ಅತ್ಯುತ್ತಮ ಸೌಲಭ್ಯ ನೀಡಲಾಗುತ್ತಿದೆ. ಕೈದಿಯಂತೆ ನಡೆಸಿಕೊಳ್ಳಲಾಗುತ್ತಿಲ್ಲವೆಂದು ಡಿಐಜಿ ಡಿ. ರೂಪಾ ಡಿಜಿಪಿ ಆರ್.ಕೆ. ದತ್ತಾ ಅವರಿಗೆ ಒದಗಿಸಿರುವ ಹಲವು ಸಾಕ್ಷ್ಯಗಳ ಪೈಕಿ ಈ ವಿಡಿಯೋವನ್ನೂ ನೀಡಿದ್ದಾರೆ ಎಂದು ತಿಳಿದು ಬಂದಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರಪತಿ ಭವನದಲ್ಲಿ ಈಗ ಸಸ್ಯಾಹಾರ ಮಾತ್ರ! ಕಾರಣವೇನು ಗೊತ್ತಾ?