ಸಿಎಂ ಕುರ್ಚಿಗಾಗಿ ಗುದ್ದಾಟದ ನಡುವೆ ಆ ಸ್ಥಾನ ಬೇಕಾಗಿಲ್ಲವೆಂದ ಸಂತೋಷ್ ಲಾಡ್‌

Sampriya
ಭಾನುವಾರ, 30 ನವೆಂಬರ್ 2025 (19:24 IST)
Photo Credit X
ಬೀದರ್‌: ರಾಜ್ಯ ರಾಜಕಾರಣದಲ್ಲಿ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮಧ್ಯೆ ತೀವ್ರ ಪೈಪೋಟಿಯಿರುವಾಗ, ನನಗೆ ಆಗಬೇಕೆಂಬ ಆಸಕ್ತಿ ನನಗಿಲ್ಲ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು. 

ನಗರದ ಗಣೇಶ್‌ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಮರಾಠಾ ಸ್ವಾಭಿಮಾನಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನಾಲ್ಕು ಸಲ ಶಾಸಕನಾಗಿ, ಮೂರು ಸಲ ಸಚಿವನಾಗಿ ಕೆಲಸ ಮಾಡಿದ್ದೇನೆ. ರಾಜಕಾರಣ ಮಾಡದಿದ್ದರೂ ನಾನು ಆರಾಮಾಗಿ ಇರಬಹುದು. ಕಷ್ಟದಲ್ಲಿರುವ ಮರಾಠಾ ಸಮಾಜವನ್ನು ಮೇಲೆತ್ತುವ ಕೆಲಸವಾಗಬೇಕಿದೆ. ಈ ಕಾರ್ಯಕ್ರಮದ ಉದ್ದೇಶವು ಅದೇ ಆಗಿದೆ ಎಂದರು. 

ಮರಾಠಾ ಸಮಾಜವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಏಳಿಗೆ ಹೊಂದಬೇಕು. ಈ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದರೆ ರಾಜಕೀಯವಾಗಿ ಮೇಲೆ ಬರಬಹುದು. ಜೀಜಾಮಾತಾ ಹೆಸರಿನಲ್ಲಿ ತಕ್ಷಣವೇ ಒಂದು ಟ್ರಸ್ಟ್‌ ಸ್ಥಾಪಿಸಿ, ನೋಂದಣಿ ಪ್ರಕ್ರಿಯೆ ಆರಂಭಿಸಬೇಕೆಂದರು. ಇದಕ್ಕೆ ನನ್ನ ಫೌಂಡೇಶನ್‌ನಿಂದ ಎಲ್ಲ ರೀತಿಯ ಅಗತ್ಯ ನೆರವು ನೀಡಲಾಗುವುದು ಎಂದು ಆಶ್ವಾಸನೆ ನೀಡಿದರು.

ಇದಕ್ಕೂ ಮುನ್ನ ಮಾತನಾಡಿದ ಮುಖಂಡ ಪದ್ಮಾಕರ್‌ ಪಾಟೀಲ್‌, ಸಂತೋಷ್‌ ಲಾಡ್‌ ನಮ್ಮ ಸಮಾಜದ ದೊಡ್ಡ ಆಸ್ತಿ. ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಕುರ್ಚಿಗಾಗಿ ಗುದ್ದಾಟದ ನಡುವೆ ಆ ಸ್ಥಾನ ಬೇಕಾಗಿಲ್ಲವೆಂದ ಸಂತೋಷ್ ಲಾಡ್‌

ಸರ್ಕಾರಿ ಬಸ್‌ಗಳು ಮುಖಾಮುಖಿ ಡಿಕ್ಕಿ: ತಮಿಳುನಾಡಿನಲ್ಲಿ 7ಮಂದಿ ಸಾವು, 40 ಮಂದಿಗೆ ಗಂಭೀರ ಗಾಯ

ಅರೆಭಾಷೆಯಂತಹ ಪ್ರಾದೇಶಿಕ ಭಾಷೆ ಕನ್ನಡವನ್ನು ಶ್ರೀಮಂತಗೊಳಿಸಿದೆ: ಸಿದ್ದರಾಮಯ್ಯ

ಸಿಎಂ, ಡಿಸಿಎಂ ಒಗ್ಗಟ್ಟು ನೋಡಿ ಖುಷಿಯಾಯಿತು: ಸಂತೋಷ್ ಲಾಡ್

ಸ್ವಾಮೀಜಿಗಳು ಇಲ್ಲದಿದ್ದರೆ ದೇವೇಗೌಡರು ಸಿಎಂ ಆಗ್ತೀದ್ರಾ: ಕುಮಾರಸ್ವಾಮಿಗೆ ಶಿವಕುಮಾರ್ ಪ್ರಶ್ನೆ

ಮುಂದಿನ ಸುದ್ದಿ
Show comments