ಸ್ಯಾಂಡಲ್ ವುಡ್ ನಟನ ನವರಂಗಿ ಆಟಕ್ಕೆ ಯುವತಿಯ ಬಾಳು ಬರ್ಬಾದ್

Krishnaveni K
ಮಂಗಳವಾರ, 20 ಫೆಬ್ರವರಿ 2024 (11:13 IST)
File photo
ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ದೈಹಿಕವಾಗಿ ಬಳಸಿ ವಂಚಿಸಿದ ಆರೋಪದಲ್ಲಿ ಸ್ಯಾಂಡಲ್ ವುಡ್ ನಟ ಸಂತೋಷ್ ಎಂಬಾತನ ವಿರುದ್ಧ ಪೊಲೀಸರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸಿನಿಮಾಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಸಂತೋಷ್ ರಾಯಚೂರು ಮೂಲದ ಹುಡುಗಿ ಜೊತೆ ಎಲ್ಲೆಂದರಲ್ಲಿ ಸುತ್ತಾಡಿಸಿ, ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ್ದ. ಬಳಿಕ ಬೇರೊಬ್ಬ ಯುವತಿಯೊಂದಿಗೆ ವಿವಾಹ ಆಗಿದ್ದ. ಇದು ತಿಳಿಯುತ್ತಿದ್ದಂತೇ ಯುವತಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

27 ವರ್ಷದ ಯುವತಿಯ ದೂರಿನ ಮೇರೆಗೆ ಪೊಲೀಸರು ಸಂತೋಷ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 2014 ರಲ್ಲಿ ಬೆಂಗಳೂರಿಗೆ ಬಂದಿದ್ದ ಯುವತಿ ಬ್ಯುಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದಳು. ಪೋಷಕರೊಂದಿಗೆ ವಾಸವಾಗಿದ್ದಳು. 2019 ರಲ್ಲಿ ಸ್ನೇಹಿತೆ ಮೂಲಕ ಸಂತೋಷ್ ನ ಪರಿಚಯವಾಗಿತ್ತು.  ಆರೋಪಿ ಸಂತೋಷ್ ತಾನು ಕನ್ನಡ, ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ನಿಮಗೂ ಅವಕಾಶ ಕೊಡಿಸುತ್ತೇನೆ ಎಂದು ನಂಬಿಸಿದ್ದ. ಬಳಿಕ ಆಗಾಗ್ಗೆ ಕರೆ ಮಾಡಿ ಸಂಪರ್ಕದಲ್ಲಿದ್ದ.

ಇಬ್ಬರ ನಡುವೆ ಸ್ನೇಹ ಗಾಢವಾಗಿದ್ದು, ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಊಟಿ, ಮೈಸೂರು, ಧರ್ಮಸ್ಥಳ ಮುಂತಾದ ಕಡೆಗೆ ಕರೆದೊಯ್ದು ಲಾಡ್ಜ್ ನಲ್ಲಿ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ಜೊತೆಗೆ ಆತನ ಜೊತೆಗಿದ್ದಾಗ ಖಾಸಗಿ ಕ್ಷಣಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿದುಕೊಂಡಿದ್ದ. ಅಲ್ಲದೆ, ಚಿನ್ನಾಭರಣ, ಐಫೋನ್ ಕೂಡಾ ಕಸಿದುಕೊಂಡಿರುವುದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಳು. ಬಳಿಕ ಖಾಸಗಿ ವಿಡಿಯೋ ಇಟ್ಟುಕೊಂಡು ಕರೆದಾಗ ಬರದೇ ಇದ್ದರೆ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ. ಈತನ ಕಾಟ ಮಿತಿ ಮೀರಿದಾಗ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಾಚ್ ಪ್ರಶ್ನೆಯೆತ್ತಿದ ನಾರಾಯಣಸ್ವಾಮಿಗೆ ಡಿಸಿಎಂ ಡಿಕೆ ಶಿವಕುಮಾರ್ ವ್ಯಂಗ್ಯ ಪ್ರತಿಕ್ರಿಯೆ

ಸರ್ದಾರ್ ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಧನ ಕದಿಯುತ್ತಿದ್ದ ಇಬ್ಬರ ಬಂಧನ

ಭಾರತಕ್ಕೆ ಬಂದಿಳಿದ ಪುಟಿನ್,ಅಪ್ಪುಗೆಯೊಂದಿಗೆ ಸ್ವಾಗತಿಸಿದ ನರೇಂದ್ರ ಮೋದಿ

ಕೇಂದ್ರದ ಮಾಜಿ ಸಚಿವೆ ಸುಷ್ಮಾ ಪತಿ ಸ್ವರಾಜ್ ಕೌಶಲ್ ನಿಧನ, ಪುತ್ರಿ ಭಾವನಾತ್ಮಕ ಪೋಸ್ಟ್‌

ನಿಮ್ಮ ಸಮಯ ಸರಿ ಇದ್ದರೆ ವಾಚ್ ವಿಷಯ ಬರುತ್ತಿರಲಿಲ್ಲ: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

ಮುಂದಿನ ಸುದ್ದಿ