Select Your Language

Notifications

webdunia
webdunia
webdunia
webdunia

ಸ್ಯಾಮ್‌ಸುಂಗ್‌ನಿಂದ ಆಧುನಿಕ ತಂತ್ರಜ್ಞಾನದ ಗೆಲ್ಯಾಕ್ಸಿ ನೋಟ್ 7 ಮಾರುಕಟ್ಟೆಗೆ

ಸ್ಯಾಮ್‌ಸುಂಗ್‌ನಿಂದ ಆಧುನಿಕ ತಂತ್ರಜ್ಞಾನದ ಗೆಲ್ಯಾಕ್ಸಿ ನೋಟ್ 7 ಮಾರುಕಟ್ಟೆಗೆ
ನವದೆಹಲಿ , ಸೋಮವಾರ, 29 ಆಗಸ್ಟ್ 2016 (16:19 IST)
ಕೊರಿಯಾ ಮೂಲದ ದೈತ್ಯ ಸ್ಮಾರ್ಟ್‌ಪೋನ್ ತಯಾರಿಕಾ ಸಂಸ್ಥೆಯಾಗಿರುವ ಸ್ಯಾಮ್‌ಸುಂಗ್, ಈ ತಿಂಗಳ ಆರಂಭದಲ್ಲಿ ಘೋಷಿಸಲಾಗಿದ್ದ ಗೆಲ್ಯಾಕ್ಸಿ ನೋಟ್-7 ಆವೃತ್ತಿಯನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
 
ಸೆಪ್ಟೆಂಬರ್ 2 ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿರುವ ಗೆಲ್ಯಾಕ್ಸಿ ನೋಟ್-7 ಆವೃತ್ತಿಯ ಪ್ಯಾಬ್ಲೆಟ್‌ಗಳು, 59,990 ರೂಪಾಯಿ ಬೆಲೆಯಲ್ಲಿ ಗ್ರಾಹಕರ ಕೈ ಸೇರಲಿವೆ.
 
ಗೆಲ್ಯಾಕ್ಸಿ ನೋಟ್-7, 5.7 ಇಂಚಿನ ಸೂಪರ್ ಎಎಂಓಎಲ್‌ಇಡಿ ಕ್ಯೂಎಚ್‌ಡಿ ಡಿಸ್‌ಪ್ಲೇ ಮತ್ತು ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ವೈಶಿಷ್ಟ್ಯವನ್ನು ಹೊಂದಿದೆ. ಈ ಆವೃತ್ತಿಯ ಪ್ಯಾಬ್ಲೆಟಿನ ಎರಡು ತುದಿಯಲ್ಲಿ ಉಭಯ ಅಂಚಿನ ಡಿಸ್‌ಪ್ಲೇ ಹೊಂದಿದೆ. 
 
ಐಪಿ68 ಪ್ರಮಾಣಿತ ಗೆಲ್ಯಾಕ್ಸಿ ನೋಟ್-7 ಆವೃತ್ತಿ ಪ್ಯಾಬ್ಲೆಟ್‌ಗಳು, 1.5 ಮೀಟರ್ ಆಳದ ನೀರಿನಲ್ಲಿ 30 ನಿಮಿಷಗಳ ಕಾಲ ಮುಳುಗಿದರು ರಕ್ಷಣೆ ಪಡೆದುಕೊಳ್ಳುತ್ತವೆ. 
 
ಗೆಲ್ಯಾಕ್ಸಿ ಎಸ್‌-7 ಹಾಗೂ ಎಸ್-7ಎಡ್ಜ್‌ಗಳಂತೆ ಸ್ಯಾಮ್‌ಸುಂಗ್ ಎಕ್ಸ್‌ನೋಸ್ 8890 64-ಬಿಟ್ ಆಕ್ಟಾ ಕೋರ್ ಪ್ರೊಸೆಸರ್ ವೈಶಿಷ್ಟ್ಯ ಹೊಂದಿದೆ. ಸ್ಯಾಮ್‌ಸುಂಗ್ ರ್ಯಾಮ್ ರೇಸ್‌ನಲ್ಲಿ ಇಲ್ಲದ ಕಾರಣ ಗೆಲ್ಯಾಕ್ಸಿ ನೋಟ್-7 ಆವೃತ್ತಿ ಪ್ಯಾಬ್ಲೆಟ್‌ಗಳಲ್ಲೂ ಸಹ 4ಜಿಬಿ ರ್ಯಾಮ್‌ನ್ನೇ ಮುಂದುವರೆಸಿದೆ. 
 
ಹೊಸ ವೈಶಿಷ್ಟ್ಯದ ಗೆಲ್ಯಾಕ್ಸಿ ನೋಟ್-7 ಆವೃತ್ತಿ ಪ್ಯಾಬ್ಲೆಟ್‌ಗಳು 64 ಜಿಬಿ ಆಂತರಿಕ ಸ್ಟೋರೇಜ್ ಹಾಗೂ 256 ವಿಸ್ತರಣೆಯ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. 
 
ಈ ಪ್ಯಾಬ್ಲೆಟ್‌ಗಳು 4ಕೆ ವಿಡಿಯೋ ಕ್ಯಾಪ್ಚರ್ ಜೊತೆಗೆ ಡ್ಯುಯಲ್ ಪಿಕ್ಸೆಲ್ ತಂತ್ರಜ್ಞಾನ ಹೊಂದಿರುವ 12 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ ಹೊಂದಿದ್ದು, ವೀಡಿಯೊಗಳು ಉತ್ತಮ ಗುಣಮಟ್ಟದಲ್ಲಿ ವೀಕ್ಷಿಸಲು ವೀಡಿಯೊ ಎನ್‌ಹಾನ್ಸರ್ ವಿಶೇಷತೆಯನ್ನು ಹೊಂದಿದೆ. ರಕ್ಷಣೆ ಹಿತದೃಷ್ಟಿಯಿಂದ ಐಆರ್‌ಐಎಸ್ ಸ್ಕ್ಯಾನರ್ ಒಳಗೊಂಡಿದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಗೂಗಲ್ ನಂತ್ರ, ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆ ನೀಡಲಿರುವ ಫೇಸ್‌ಬುಕ್