Select Your Language

Notifications

webdunia
webdunia
webdunia
webdunia

ಬ್ಲ್ಯಾಕ್ ಫಂಗಸ್ಗೆ ಒಂದೇ ದಿನ 11 ಬಲಿ : ಏರಿದ ಸೋಂಕು

ಬ್ಲ್ಯಾಕ್ ಫಂಗಸ್ಗೆ ಒಂದೇ ದಿನ 11 ಬಲಿ : ಏರಿದ ಸೋಂಕು
Bangalore , ಗುರುವಾರ, 22 ಜುಲೈ 2021 (08:22 IST)
ಬೆಂಗಳೂರು (ಜು.22):  ರಾಜ್ಯದಲ್ಲಿ ಮಂಗಳವಾರ ಕಪ್ಪು ಶಿಲೀಂಧ್ರ ಸೋಂಕಿನಿಂದ 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಈವರೆಗೆ ಕಪ್ಪು ಶಿಲೀಂಧ್ರ ಸೋಂಕಿನಿಂದ ಮರಣವನ್ನಪ್ಪಿದವರ ಸಂಖ್ಯೆ 324ಕ್ಕೆ ಏರಿದೆ.


ಇದೇ ವೇಳೆ 16 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, ರಾಜ್ಯದಲ್ಲಿ ಈವರೆಗೆ 3,604 ಮಂದಿಯಲ್ಲಿ ಕಪ್ಪು ಶಿಲೀಂಧ್ರ ಧೃಢ ಪಟ್ಟಿದೆ.

•             ರಾಜ್ಯದಲ್ಲಿ ಮಂಗಳವಾರ ಕಪ್ಪು ಶಿಲೀಂಧ್ರ ಸೋಂಕಿನಿಂದ 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ
•             ರಾಜ್ಯದಲ್ಲಿ ಈವರೆಗೆ ಕಪ್ಪು ಶಿಲೀಂಧ್ರ ಸೋಂಕಿನಿಂದ ಮರಣವನ್ನಪ್ಪಿದವರ ಸಂಖ್ಯೆ 324ಕ್ಕೆ ಏರಿದೆ

ಕರ್ನಾಟಕದಲ್ಲಿ ಕೊರೋನಾ ಕೊಂಚ ಏರಿಕೆ: ಜು. 21ರ ಅಂಕಿ-ಸಂಖ್ಯೆ ನೋಡಿ
ಬೆಂಗಳೂರು ನಗರದಲ್ಲಿ ಈವರೆಗೆ 1,148 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 110 ಮಂದಿ ಮೃತಪಟ್ಟಿದ್ದಾರೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 208, ಬೌರಿಂಗ್ ಆಸ್ಪತ್ರೆಯಲ್ಲಿ 379, ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ನಾಲ್ವರು ಹಾಗೂ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಮೂವರು ಮಕ್ಕಳು ಸೇರಿದಂತೆ ನಗರದಲ್ಲಿ 594 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಚೀನಾ, 1,000 ವರ್ಷದಲ್ಲೇ ಭೀಕರ ಮಳೆ: 12 ಲಕ್ಷ ಜನ ನಿರ್ವಸಿತ!